ಮುಂಬೈ: ಸದ್ಯಕ್ಕೆ ವಿಶ್ವದ ಘಟಾನುಘಟಿ ಕ್ರಿಕೆಟ್ ತಂಡಗಳ ಪೈಕಿ ಭಾರತವನ್ನು ಬಿಟ್ಟರೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಸೇರ್ಪಡೆಯಾಗುತ್ತವೆ.
ಈ ಘಟಾನುಘಟಿ ತಂಡಗಳಲ್ಲಿ ಬಲಾಢ್ಯರು ಯಾರು ಎಂಬ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ಸಿಗುವ ನಿರೀಕ್ಷೆಯಿದೆ. ಯಾಕೆಂದರೆ ಈ ಮೂರೂ ತಂಡಗಳನ್ನೊಳಗೊಂಡ ಸೂಪರ್ ಸೀರೀಸ್ ಆಯೋಜಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಯೋಜನೆ ನಡೆಸಿದ್ದಾರೆ.
ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಐಸಿಸಿ ಟೂರ್ನಿಯ ಮಾದರಿಯಲ್ಲಿ ವರ್ಷಕ್ಕೊಂದು ಸೂಪರ್ ಸೀರೀಸ್ ಆಯೋಜಿಸಲು ಗಂಗೂಲಿ ಯೋಜನೆ ರೂಪಿಸಿದ್ದಾರೆ. 2021 ರಿಂದ ಇಂತಹದ್ದೊಂದು ಸರಣಿಯನ್ನು ಪ್ರತೀ ವರ್ಷವೂ ನಡೆಸಿ ವೀಕ್ಷಕರನ್ನು ಕ್ರಿಕೆಟ್ ಕಡೆಗೆ ಸೆಳೆಯುವಂತೆ ಮಾಡುವುದು ಗಂಗೂಲಿ ಯೋಜನೆ. ಒಂದು ವೇಳೆ ಇಂತಹದ್ದೊಂದು ಸರಣಿ ನಡೆದರೆ ಅದು ನಿಜಕ್ಕೂ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣವಾಗಲಿದೆ.