ಮುಂಬೈ: ನಮ್ಮ ಪರಿಸರ ಸ್ವಚ್ಛವಾಗಬೇಕು ಎಂದು ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲು ಸಾಮಾಜಿಕ ಚಿಂತಕರು, ಹೋರಾಟಗಾರರು ಪ್ರಯತ್ನ ಮಾಡುತ್ತಲೇ ಇರುತ್ತಾರೆ.
ನಾವು ಎಲ್ಲೇ ಇರಲಿ, ಯಾವುದೇ ದೇಶದಲ್ಲೇ ಇರಲಿ, ನಮ್ಮ ಸುತ್ತಮುತ್ತಲಿನ ಪರಿಸರ ಸುಂದರವಾಗಿಡಬೇಕಾಗಿರುವುದು ನಮ್ಮ ಕರ್ತವ್ಯ. ಸ್ವಚ್ಛತೆ ಬಗ್ಗೆ ಕಾಳಜಿ ವಹಿಸುವ, ಅರಿವು ಮೂಡಿಸುವ ಮತ್ತು ಇತರರಿಗೆ ಮಾದರಿಯಾಗಿರುವ ಎಷ್ಟೋ ಸೆಲೆಬ್ರಿಟಿಗಳು, ಜನ ಸಾಮಾನ್ಯರು ನಮ್ಮ ನಡುವೆ ಇದ್ದಾರೆ.
ಅದರ ನಡುವೆ ಎಲ್ಲರ ಗಮನ ಸೆಳೆದಿದ್ದು ಈ ಆಸ್ಟ್ರೇಲಿಯಾ ಮೂಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ್ತಿ ಎಲ್ಸೆ ಪೆರಿ. ಪ್ರತೀ ಪಂದ್ಯದ ಬಳಿಕ ಎಲ್ಸೆ ಪೆರಿ ತಮ್ಮ ತಂಡ ಕೂರುವ ಡಗೌಟ್, ಸುತ್ತಮುತ್ತಲ ಪರಿಸರದಲ್ಲಿ ಬಿದ್ದಿರುವ ಕಸ, ಖಾಲಿ ಬಾಟಲಿಗಳನ್ನು ಹೆಕ್ಕಿ ಕಸದ ಬುಟ್ಟಿಯಲ್ಲಿ ಹಾಕಿ ಸ್ವಚ್ಛತೆ ಮಾಡುತ್ತಾರಂತೆ. ಇಂತಹದ್ದೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೇ ಸಾವಿರಾರು ಅಭಿಮಾನಿಗಳನ್ನು ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಈ ಬಗ್ಗೆ ಅವರನ್ನು ಕೇಳಿದಾಗ ನಾವು ಎಲ್ಲೇ ಇರಲಿ, ನಮ್ಮ ಪರಿಸರವನ್ನು ನಾವು ಗೌರವಿಸಬೇಕು ಎಂದು ಪೆರಿ ಹೇಳುತ್ತಾರೆ. ಎಲ್ಲಿಯ ಆಸ್ಟ್ರೇಲಿಯಾ ಆಟಗಾರ್ತಿ? ಎಲ್ಲಿಯ ಭಾರತ? ಆಕೆ ತಾನೊಬ್ಬ ಸೆಲೆಬ್ರಿಟಿ. ಅದೂ ಭಾರತ ನನ್ನ ದೇಶವೇ ಅಲ್ಲ. ಅದೂ ಸಾಲದ್ದಕ್ಕೆ ವಿಶ್ವದ ಶ್ರೀಮಂತ ಕ್ರಿಕೆಟ್ ಆಟಗಾರ್ತಿ, ಖ್ಯಾತ ಕ್ರಿಕೆಟ್ ಕ್ರಿಕೆಟ್ ಆಟಗಾರ್ತಿ ಎಂಬಿತ್ಯಾದಿ ಬಿರುದುಗಳನ್ನು ಪಡೆದವರು. ಹೀಗಿದ್ದಾಗ ನಾನ್ಯಾಕೆ ಇನ್ನೊಂದು ದೇಶದಲ್ಲಿ ಕ್ಲೀನಿಂಗ್ ಕೆಲಸ ಮಾಡಬೇಕು ಎಂದು ಅಹಂ ತೋರಿಸಬಹುದಿತ್ತು. ಆದರೆ ಆಕೆ ಅದನ್ನು ಮಾಡದೇ ತಾನಿರುವ ಪರಿಸರವನ್ನು ಯಾವುದೇ ಸೆಲೆಬ್ರಿಟಿ ಎಂಬ ಗತ್ತಿಲ್ಲದೇ ಶುಚಿಗೊಳಿಸುವ ಮೂಲಕ ಇತರರಿಗೂ ಮಾದರಿಯಾಗಿದ್ದಾಳೆ. ಇಂತಹ ಸೆಲೆಬ್ರಿಟಿಗಳು ಸಾಮಾನ್ಯ ಜನರಿಗೆ ಸ್ಪೂರ್ತಿಯಾಗಬೇಕು. ಆಕೆ ನಮ್ಮ ದೇಶದ ಆಟಗಾರ್ತಿ ಅಲ್ಲದೇ ಇರಬಹುದು. ಆದರೆ ಅವರು ನಮ್ಮ ಸ್ವಚ್ಛತಾ ರೋಲ್ ಮಾಡೆಲ್ ಗಳಾಗಬೇಕು.