ನವದೆಹಲಿ: 2016 ರಲ್ಲಿ ಚೆನ್ನೈನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಪಿಚ್ ಫಿಕ್ಸಿಂಗ್ ನಡೆದಿತ್ತು ಎಂಬ ದುಬೈ ಮೂಲದ ಖಾಸಗಿ ವಾಹಿನಿಯ ವರದಿಯನ್ನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಳ್ಳಿ ಹಾಕಿದೆ.
ನಮ್ಮ ಆಟಗಾರರು ಇಂತಹ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ. ಖಾಸಗಿ ವಾಹಿನಿಯ ಚುಟುಕು ಕಾರ್ಯಾಚರಣೆ ಬಗ್ಗೆ ನಾವು ಕ್ರಿಕೆಟಿಗರೊಂದಿಗೆ ಚರ್ಚಿಸಿದ್ದೇವೆ. ನಮ್ಮ ಕ್ರಿಕೆಟಿಗರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಪ್ರಕಟಣೆ ತಿಳಿಸಿದೆ.
ಅಲ್ ಜಜೀರಾ ಟಿವಿ ವಾಹಿನಿಯ ವರದಿ ಪ್ರಕಾರ ಚೆನ್ನೈ ಟೆಸ್ಟ್ ಪಂದ್ಯದ ಪಿಚ್ ಪೂರ್ವ ನಿರ್ಧಾರಿತವಾಗಿತ್ತು. ಈ ಪಂದ್ಯದಲ್ಲಿ ಪಿಚ್ ಫಿಕ್ಸಿಂಗ್ ನಲ್ಲಿ ಇಂಗ್ಲೆಂಡ್ ನ ಇಬ್ಬರು ಆಟಗಾರರೂ ಭಾಗಿಯಾಗಿದ್ದರು ಎನ್ನಲಾಗಿತ್ತು. ಆದರೆ ಇದೆಲ್ಲವನ್ನೂ ಇಸಿಬಿ ತಳ್ಳಿ ಹಾಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.