Publish Date: Sat, 26 May 2018 (08:50 IST)
Updated Date: Sat, 26 May 2018 (08:52 IST)
ಬೆಂಗಳೂರು: ಕನ್ನಡಿಗ, ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ತಮ್ಮ ನಾಯಕ ವಿರಾಟ್ ಕೊಹ್ಲಿ ನೀಡಿದ ಫಿಟ್ ನೆಸ್ ಚಾಲೆಂಜ್ ಪೂರ್ತಿ ಮಾಡಿದ್ದಾರೆ.
ಕ್ರೀಡಾ ಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್ ಆರಂಭಿಸಿದ ಫಿಟ್ ನೆಸ್ ಚಾಲೆಂಜ್ ಅಭಿಯಾನದಲ್ಲಿ ಪಾಲ್ಗೊಂಡ ವಿರಾಟ್ ಕೊಹ್ಲಿ ಕೆಎಲ್ ರಾಹುಲ್ ಗೂ ಸವಾಲು ಸ್ವೀಕರಿಸಲು ಆಹ್ವಾನವಿತ್ತಿದ್ದರು.
ಅದರಂತೆ ತಮ್ಮ ಫೇವರಿಟ್ ಎಕ್ಸರ್ ಸೈಸ್ ಮಾಡಿ ವಿಡಿಯೋ ಅಪ್ ಲೋಡ್ ಮಾಡಿರುವ ರಾಹುಲ್ ತಮ್ಮ ಕ್ರಿಕೆಟ್ ವಲಯದ ಸ್ನೇಹಿತರಾದ ದಿನೇಶ್ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯಗೆ ಸವಾಲು ಹಾಕಿದ್ದಾರೆ. ಇದೀಗ ರಾಹುಲ್ ನೀಡಿದ ಸವಾಲು ಸ್ವೀಕರಿಸಿ ಈ ಕ್ರಿಕೆಟಿಗರೂ ತಮ್ಮ ಫಿಟ್ ನೆಸ್ ವಿಡಿಯೋ ಹಾಕುತ್ತಾರಾ ನೋಡಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.