Publish Date: Tue, 15 Jan 2019 (09:03 IST)
Updated Date: Tue, 15 Jan 2019 (09:04 IST)
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಏಕದಿನ ಪಂದ್ಯಕ್ಕೆ ಮೊದಲು ಹಿರಿಯ ಕ್ರಿಕೆಟಿಗ ಧೋನಿ ನೆಟ್ಸ್ ನಲ್ಲಿ ಸಹ ಆಟಗಾರ ದಿನೇಶ್ ಕಾರ್ತಿಕ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸ್ಪಿನ್ ಬೌಲರ್ ಗಳನ್ನು ಎದುರಿಸುವುದು ಹೇಗೆ ಎಂದು ಧೋನಿ ದಿನೇಶ್ ಕಾರ್ತಿಕ್ ಗೆ ಸಲಹೆ ನೀಡಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಸ್ವತಃ ಧೋನಿ ಸ್ಪಿನ್ನರ್ ಗಳನ್ನು ಎದುರಿಸಲು ತಿಣಕಾಡಿದ್ದರು.
ಹೀಗಾಗಿ ನೆಟ್ಸ್ ನಲ್ಲಿ ಸ್ಪಿನ್ನರ್ ಗಳನ್ನೇ ಎದುರಿಸಿ ಅಭ್ಯಾಸ ನಡೆಸಿದ ಧೋನಿ ಸಹ ಆಟಗಾರ ದಿನೇಶ್ ಕಾರ್ತಿಕ್ ಗೂ ಒಂದೆರಡು ಎಸೆತ ಎದುರಿಸಿ ಹೇಗೆ ಎದುರಿಸಬೇಕೆಂದು ಕ್ಲಾಸ್ ಮಾಡಿದರು. ಇವರ ಈ ಪಾಠ ಎಷ್ಟರಮಟ್ಟಿಗೆ ಪ್ರಯೋಜನಕ್ಕೆ ಬರುತ್ತದೆ ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ