Publish Date: Mon, 14 Jan 2019 (10:10 IST)
Updated Date: Mon, 14 Jan 2019 (10:11 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಗೆ ಅಮಾನತುಗೊಂಡ ಕೆಎಲ್ ರಾಹುಲ್ ಬದಲಿಗೆ ಮತ್ತೊಬ್ಬ ಕನ್ನಡಿಗ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಆಯ್ಕೆಯಾಗದೇ ಇರಲು ಕಾರಣ ಬಯಲಾಗಿದೆ.
ಮಯಾಂಕ್ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಎರಡು ಟೆಸ್ಟ್ ಪಂದ್ಯಗಳಾಡಿ ಅದ್ಭುತ ಪ್ರದರ್ಶನ ತೋರಿದ್ದರು. ಹಾಗಿದ್ದರೂ ಅವರನ್ನು ಏಕದಿನ ತಂಡಕ್ಕೆ ಆಯ್ಕೆ ಮಾಡದೇ ಇದ್ದಿದ್ದು ಯಾಕೆ ಎಂದು ಪ್ರಶ್ನೆಗಳು ಎದ್ದಿದ್ದವು.
ಮೂಲಗಳ ಪ್ರಕಾರ ಮಯಾಂಕ್ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರನ್ನು ಏಕದಿನ ತಂಡಕ್ಕೆ ಆಯ್ಕೆ ಮಾಡದೇ ಭಾರತ ಎ ತಂಡದ ಪ್ರತಿಭಾವಂತ ಶಬ್ನಮ್ ಗಿಲ್ ಗೆ ಅವಕಾಶ ನೀಡಲಾಯಿತು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
Krishnaveni K
Publish Date: Mon, 14 Jan 2019 (10:10 IST)
Updated Date: Mon, 14 Jan 2019 (10:11 IST)