Publish Date: Tue, 02 Jan 2024 (11:23 IST)
Updated Date: Tue, 02 Jan 2024 (11:26 IST)
ಸಿಡ್ನಿ: ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನ ಕೊನೆಯ ಪಂದ್ಯವಾಡುತ್ತಿರುವ ಡೇವಿಡ್ ವಾರ್ನರ್ ಗೆ ಈಗ ವಿಚಿತ್ರ ಸಂಕಷ್ಟಕ್ಕೀಡಾಗಿದ್ದಾರೆ.
ಅವರ ಮೆಚ್ಚಿನ ಗ್ರೀನ್ ಕ್ಯಾಪ್ ಎಲ್ಲೋ ಮಿಸ್ ಆಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅವರು ಸಂಕಟ ತೋಡಿಕೊಂಡು ದಯವಿಟ್ಟು ಸಿಕ್ಕವರು ನನಗೆ ಹಿಂದುರಿಗಿಸಿ ಎಂದು ಮನವಿ ಮಾಡಿದ್ದಾರೆ.
ವಾರ್ನರ್ ಕಳೆದ 12 ವರ್ಷಗಳಿಂದ ತೊಡುತ್ತಿದ್ದ ಗ್ರೀನ್ ಕ್ಯಾಪ್ ಇದು. ಟೋಪಿ ಅಲ್ಲಲ್ಲಿ ಕಿತ್ತು ಹೋಗಿದ್ದರೂ ಅದರ ಮೇಲೆ ಭಾವನಾತ್ಮಕ ನಂಟಿನಿಂದ ವಾರ್ನರ್ ಅದೇ ಕ್ಯಾಪ್ ತೊಡುತ್ತಿದ್ದರು.
ಆದರೆ ಈಗ ಮೆಲ್ಬೋರ್ನ್ ನಿಂದ ಕೊನೆಯ ಪಂದ್ಯವಾಡಲು ಸಿಡ್ನಿಗೆ ಬರುವಾಗ ಲಗೇಜ್ ಒಂದು ಮಿಸ್ ಆಗಿದ್ದು ಅದರಲ್ಲಿ ಕ್ಯಾಪ್ ಕೂಡಾ ಇತ್ತು. ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿಯೂ ಕ್ಯಾಪ್ ಎಲ್ಲಿ ಹೋಯ್ತು ಎಂದು ಸ್ಪಷ್ಟವಾಗಿಲ್ಲ. ಹೀಗಾಗಿ ಯಾರಾದರೂ ತೆಗೆದುಕೊಂಡಿದ್ದರೆ ದಯವಿಟ್ಟು ಹಿಂದಿರುಗಿಸಿ, ನಿಮಗೆ ಬೇರೊಂದು ಕ್ಯಾಪ್ ನೀಡುತ್ತೇನೆ ಎಂದು ಮನವಿ ಮಾಡಿದ್ದಾರೆ.