Publish Date: Tue, 16 Nov 2021 (09:05 IST)
Updated Date: Tue, 16 Nov 2021 (09:16 IST)
ಮುಂಬೈ: ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುವ ಕ್ರಿಕೆಟಿಗ ಡೇವಿಡ್ ವಾರ್ನರ್ ಈ ಟಿ20 ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ಗೆಲುವಿನ ರೂವಾರಿಯಾಗಿ ಹೀರೋ ಎನಿಸಿಕೊಂಡಿದ್ದಾರೆ.
ಕ್ಲಾಸ್ ಪರ್ಮೆನೆಂಟ್ ಎಂಬ ಮಾತನ್ನು ವಾರ್ನರ್ ಸಾಧಿಸಿ ತೋರಿಸಿದ್ದಾರೆ. ಐಪಿಎಲ್ 14 ರ ಆರಂಭಿಕ ಹಂತದಲ್ಲಿ ವಾರ್ನರ್ ಕಳಪೆ ಫಾರ್ಮ್ ನಲ್ಲಿದ್ದರು ಎಂಬ ಕಾರಣಕ್ಕೆ ಅವರಿಂದ ನಾಯಕತ್ವ ಕಿತ್ತುಕೊಳ್ಳಲಾಯಿತು. ಬಳಿಕ ಎರಡನೇ ಹಂತದಲ್ಲಿ ಅವರನ್ನು ಆಡುವ ಬಳಗದಿಂದಲೇ ಹೊರಹಾಕಿ ಅವಮಾನ ಮಾಡಲಾಯಿತು.
ಆದರೆ ಈ ಬಾರಿ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಸೋಲುತ್ತಿದ್ದ ಆಸೀಸ್ ಗೆ ಬಲ ತುಂಬಿದ್ದು ವಾರ್ನರ್ ಸ್ಪೋಟಕ ಬ್ಯಾಟಿಂಗ್. ಫೈನಲ್ ನಲ್ಲೂ ವಾರ್ನರ್ ನೀಡಿದ ಉತ್ತಮ ಆರಂಭದಿಂದಾಗಿ ಆಸ್ಟ್ರೇಲಿಯಾಗೆ ಸುಲಭ ಜಯ ದೊರಕಿತು. ಪಂದ್ಯದ ನಂತರ ಆಸೀಸ್ ನಾಯಕ ಫಿಂಚ್ ಕೂಡಾ ವಾರ್ನರ್ ಬಗ್ಗೆ ಹೊಗಳಿದ್ದಾರೆ. ಈ ಮೂಲಕ ಹೈದರಾಬಾದ್ ಕಡೆಗಣಿಸಿದ ವಾರ್ನರ್ ಆಸೀಸ್ ಪಾಲಿನ ಹೀರೋ ಆಗಿದ್ದಾರೆ.