Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಏಕದಿನ ವಿಶ್ವಕಪ್: ಸೆಮಿಫೈನಲ್ ಮಳೆಗಾಹುತಿಯಾದರೂ ಟೀಂ ಇಂಡಿಯಾಗಿಲ್ಲ ಚಿಂತೆ!

ಏಕದಿನ ವಿಶ್ವಕಪ್: ಸೆಮಿಫೈನಲ್ ಮಳೆಗಾಹುತಿಯಾದರೂ ಟೀಂ ಇಂಡಿಯಾಗಿಲ್ಲ ಚಿಂತೆ!
ಮುಂಬೈ , ಮಂಗಳವಾರ, 14 ನವೆಂಬರ್ 2023 (08:50 IST)
File photo
ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ರ ಸೆಮಿಫೈನಲ್ ಪಂದ್ಯಗಳು ಇನ್ನೇನು ಆರಂಭವಾಗುತ್ತಿದೆ. ಆದರೆ ಸೆಮಿಫೈನಲ್ ಮಳೆಗೆ ಆಹುತಿಯಾದರೆ ಫಲಿತಾಂಶ ಏನಾಗುತ್ತದೆ? ಇಲ್ಲಿ ನೋಡಿ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಸೆಮಿಫೈನಲ್ ಪಂದ್ಯ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿದೆ. ಒಂದು ವೇಳೆ ಈ ಪಂದ್ಯಕ್ಕೆ ಮಳೆ ಅಡ್ಡಿಯಾಗಿ ಪಂದ್ಯ ನಡೆಯದೇ ಹೋದರೆ ಭಾರತಕ್ಕೆ ಅನುಕೂಲವಾಗಲಿದೆ. ನೆಟ್ ರನ್ ರೇಟ್ ಆಧಾರದಲ್ಲಿ ಭಾರತ ನೇರವಾಗಿ ಫೈನಲ್ ಗೆ ಅರ್ಹತೆ ಪಡೆಯಲಿದೆ.

ಇನ್ನೊಂದು ಸೆಮಿಫೈನಲ್ ನಲ್ಲಿ ದ.ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲೂ ಒಂದು ವೇಳೆ ವರುಣ ಅಡ್ಡಿಯಾದರೆ ನೆಟ್ ರನ್ ರೇಟ್ ನಲ್ಲಿ ಮುಂದಿರುವ ಆಫ್ರಿಕಾ ಫೈನಲ್ ತಲುಪಲಿದೆ. ಒಂದು ವೇಳೆ ಕನಿಷ್ಠ ಓವರ್ ಗಳ ಪಂದ್ಯ ನಡೆಸಲು ಅವಕಾಶವಿದ್ದರೂ ಸೆಮಿಫೈನಲ್ ಪಂದ್ಯ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟ್ ಆಸ್ಟ್ರೇಲಿಯಾ ವಿಶ್ವಕಪ್ ತಂಡದಲ್ಲಿ ರೋಹಿತ್ ಇಲ್ಲ: ಟಾಂಗ್ ಕೊಟ್ಟ ಫ್ಯಾನ್ಸ್