ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸೇರಿದಂತೆ ಮೂವರಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ ಸಿಕ್ಕಿದೆ.
ಟೀಂ ಇಂಡಿಯಾ ಆರಂಭಿಕರಾಗಿದ್ದ ಸೆಹ್ವಾಗ್ ಹೊಡೆಬಡಿಯ ಆಟಕ್ಕೆ ಹೆಸರು ವಾಸಿಯಾಗಿದ್ದರು. ಟೆಸ್ಟ್ ಕ್ರಿಕೆಟ್ ನಲ್ಲಿ ಎರಡು ಬಾರಿ ತ್ರಿಶತಕ, ಏಕದಿನ ಪಂದ್ಯಗಳಲ್ಲಿ ದ್ವಿಶತಕ ಸಾಧನೆ ಮಾಡಿದ್ದರು.
ಸೆಹ್ವಾಗ್ ಜೊತೆಗೆ ಟೀಂ ಇಂಡಿಯಾ ಮಹಿಳಾ ತಂಡದ ಮಾಜಿ ನಾಯಕಿ ಡಿಯಾನ ಎಡುಲ್ಜಿ, ಲಂಕಾ ಮಾಜಿ ಕ್ರಿಕೆಟಿಗ ಅರವಿಂದ ಡಿಸಿಲ್ವಗೂ ಹಾಲ್ ಫೇಮ್ ಗೌರವ ದೊರೆತಿದೆ. ಹಾಲ್ ಫೇಮ್ ಗೌರವ ಪ್ರಾಪ್ತಿಯಾದ ಮೊದಲ ಭಾರತದ ಮಹಿಳಾ ಕ್ರಿಕೆಟರ್ ಎಂಬ ಖ್ಯಾತಿಗೆ ಡಿಯಾನ ಪಾತ್ರರಾಗಿದ್ದಾರೆ.