ಚೆನ್ನೈ: ನಿನ್ನೆ ಫಾದರ್ಸ್ ಡೇ ನಿಮಿತ್ತ ಐಪಿಎಲ್ ನ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ನಾಯಕ ಧೋನಿಗೆ ವಿಶೇಷ ಗೌರವವಿತ್ತಿದೆ.
ಧೋನಿ ತನ್ನ ಮುದ್ದಿನ ಮಗಳು ಜೀವಾ ಜತೆಗೆ ಐಪಿಎಲ್ ಸಂದರ್ಭದಲ್ಲಿ ಹಲವಾರು ಬಾರಿ ಖುಷಿಯ ಕ್ಷಣಗಳನ್ನು ಕಳೆದಿದ್ದರು. ಧೋನಿಯಷ್ಟೇ ಮಗಳು ಜೀವಾ ಕೂಡಾ ಫೇಮಸ್ಸಾಗಿದ್ದಳು.
ಈ ಅಪ್ಪ-ಮಗಳು ಜೋಡಿಯ ಮುದ್ದಾದ ಫೋಟೋವನ್ನು ಸಿಎಸ್ ಕೆ ತನ್ನ ಅಧಿಕೃತ ಪೇಜ್ ನಲ್ಲಿ ಪ್ರಕಟಿಸಿದೆ. ಜತೆಗೆ ಒಬ್ಬ ಮಗಳಿಗೆ ಅಪ್ಪನೇ ಸೂಪರ್ ಹೀರೋ ಎಂದು ಸಂದೇಶವನ್ನೂ ಬರೆದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.