ಮುಂಬೈ: 2011 ರ ಏಕದಿನ ವಿಶ್ವಕಪ್ ಗೆಲುವಿನ ಮಾಸ್ಟರ್ ಮೈಂಡ್ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್ ಎಂದು ಸಹ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಬಹಿರಂಗಪಡಿಸಿದ್ದಾರೆ.
ಫೈನಲ್ ಪಂದ್ಯದಲ್ಲಿ ವಿರಾಟ್ ಮತ್ತು ಗೌತಮ್ ಬ್ಯಾಟಿಂಗ್ ಮಾಡುತ್ತಿದ್ದರು. ಫೈನಲ್ ನಲ್ಲಿ ಧೋನಿ ಯುವರಾಜ್ ಗಿಂತ ಮೊದಲು ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದಿದ್ದರು. ಈ ನಿರ್ಧಾರದ ಹಿಂದಿನ ಕಾರಣ ಸಚಿನ್ ತೆಂಡುಲ್ಕರ್ ಎಂದು ಸೆಹ್ವಾಗ್ ಹೇಳಿದ್ದಾರೆ.
‘ಅದೇ ಮೊದಲ ಬಾರಿಗೆ ಸಚಿನ್ ನೇರವಾಗಿ ಧೋನಿಗೆ ತಮ್ಮ ಸಲಹೆ ಕೊಟ್ಟಿದ್ದರು. ಆಗ ಗೌತಮ್ ಮತ್ತು ವಿರಾಟ್ ಬ್ಯಾಟಿಂಗ್ ಮಾಡುತ್ತಿದ್ದರು. ಒಂದು ವೇಳೆ ಎಡಗೈ ಆಟಗಾರ ಔಟಾದರೆ ಎಡಗೈ ಆಟಗಾರನೇ ಮುಂದೆ ಆಡಲಿಳಿಯಲಿ, ಬಲಗೈ ಆಟಗಾರ ಔಟಾದರೆ ಬಲಗೈ ಆಟಗಾರನೇ ಮೈದಾನಕ್ಕಿಳಿಯಲಿ ಎಂದು ಸಚಿನ್ ಧೋನಿಗೆ ಸಲಹೆ ನೀಡಿ ಬಾತ್ ರೂಂಗೆ ಹೋಗಿದ್ದರು.
ಆಗ ವಿರಾಟ್ ಕೊಹ್ಲಿ ಔಟಾದರು. ತಕ್ಷಣ ಧೋನಿ ಯುವರಾಜ್ ಗಿಂತ ಮೊದಲು ತಾವೇ ಬ್ಯಾಟಿಂಗ್ ಗಿಳಿದರು. ಫಲಿತಾಂಶ ಈಗ ನಿಮ್ಮ ಮುಂದೆಯೇ ಇದೆ. ಸಚಿನ್ ಆವತ್ತು ನೀಡಿದ ಸಲಹೆ ವರ್ಕೌಟ್ ಆಯಿತು’ ಎಂದು ಸೆಹ್ವಾಗ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.