Select Your Language

Notifications

webdunia
webdunia
webdunia
webdunia

ವೆಸ್ಟ್ ಇಂಡೀಸ್ ಕ್ರಿಕೆಟಿಗರಿಗೆ ಕೊರೋನಾ ಹಾವಳಿ

ವೆಸ್ಟ್ ಇಂಡೀಸ್ ಕ್ರಿಕೆಟ್
ನವದೆಹಲಿ: ಪಾಕಿಸ್ತಾನ ಪ್ರವಾಸ ಮಾಡಬೇಕಿದ್ದ ವೆಸ್ಟ್ ಇಂಡೀಸ್ ಕ್ರಿಕೆಟಿಗರಿಗೆ ಕೊರೋನಾ ಸಂಕಷ್ಟ ತಂದೊಡ್ಡಿದೆ.

ವಿಂಡೀಸ್ ತಂಡದ ಮೂವರು ಕೊರೋನಾದಿಂದಾಗಿ ಸರಣಿಯಿಂದಲೇ ಹೊರಹೋಗಿದ್ದಾರೆ. ವೇಗಿ ಶೆಲ್ಡನ್ ಕೊಟ್ರಲ್, ಆಲ್ ರೌಂಡರ್ ರೋಸ್ಟನ್ ಚೇಸ್ ಮತ್ತು ಕೈಲ್ ಮೇಯರ್ಸ್ ಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಪಾಕಿಸ್ತಾನಕ್ಕೆ ಬಂದಿಳಿದಿರುವ ಕ್ರಿಕೆಟಿಗರಿಗೆ 10 ದಿನಗಳ ಕ್ವಾರಂಟೈನ್ ಬಳಿಕ ಕೊರೋನಾ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ಸೋಂಕು ಪತ್ತೆಯಾಗಿದೆ. ಇವರೆಲ್ಲರಿಗೂ ವ್ಯಾಕ್ಸಿನ್ ಆಗಿರುವುದರಿಂದ ಹೆಚ್ಚಿನ ಲಕ್ಷಣಗಳು ಕಂಡುಬಂದಿರಲಿಲ್ಲ ಎನ್ನಲಾಗಿದೆ. ಇದೀಗ ಎಲ್ಲರನ್ನೂ ಪ್ರತ್ಯೇಕವಾಗಿರಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದ.ಆಫ್ರಿಕಾ ಸರಣಿಗೆ ಶಿಖರ್ ಧವನ್ ಗೆ ಸ್ಥಾನ ಸಿಗುವುದೇ ಅನುಮಾನ