Publish Date: Wed, 02 Mar 2022 (09:10 IST)
Updated Date: Wed, 02 Mar 2022 (09:13 IST)
ಮುಂಬೈ: ಟೀಂ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಎಲ್ಲಾ ಪಂದ್ಯಗಳಲ್ಲೂ ಉತ್ತಮ ರನ್ ಗಳಿಸಿ ಮೂರನೇ ಕ್ರಮಾಂಕಕ್ಕೆ ಉತ್ತಮ ಪೈಪೋಟಿ ನೀಡಿದ್ದಾರೆ.
ಶ್ರೇಯಸ್ ಸಂದರ್ಶನವೊಂದರಲ್ಲಿ ತನಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ಇಷ್ಟ ಎಂದಿದ್ದಾರೆ. ಆದರೆ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದರೆ ಶ್ರೇಯಸ್ ಗೆ ಬಯಸಿದ ಸ್ಥಾನ ಸಿಗುವುದು ಅನುಮಾನ.
ಕೊಹ್ಲಿ ತಂಡಕ್ಕೆ ವಾಪಸಾದರೆ ಶ್ರೇಯಸ್ ಹಿಂದೆ ಸರಿಯಲೇ ಬೇಕಾಗುತ್ತದೆ. ಇಲ್ಲವೇ ಕೊಹ್ಲಿ ತಮ್ಮ ಮೆಚ್ಚಿನ ಕ್ರಮಾಂಕ ಬಿಟ್ಟುಕೊಡಬೇಕಾಗುತ್ತದೆ. ಹೀಗಾಗಿ ಸರಣಿ ಶ್ರೇಷ್ಠನಾದರೂ ಶ್ರೇಯಸ್ ಗೆ ತಂಡದಲ್ಲಿ ಸ್ಥಾನ ಗಿಟ್ಟಿಸಲು ಪೈಪೋಟಿ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ.