Publish Date: Thu, 02 Sep 2021 (09:16 IST)
Updated Date: Thu, 02 Sep 2021 (09:17 IST)
ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದಿನಿಂದ ನಾಲ್ಕನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ತಂಡದಲ್ಲಿ ಈ ಮೂರು ಬದಲಾವಣೆ ನಿರೀಕ್ಷಿಸಲಾಗಿದೆ.
ಕಳಪೆ ಫಾರ್ಮ್ ನಲ್ಲಿರುವ ಅಜಿಂಕ್ಯಾ ರೆಹಾನೆ ಸ್ಥಾನದಲ್ಲಿ ಯುವ ಬ್ಯಾಟ್ಸ್ ಮನ್ ಹನುಮ ವಿಹಾರಿ, ಇಶಾಂತ್ ಶರ್ಮಾ ಸ್ಥಾನಕ್ಕೆ ಶ್ರಾದ್ಧೂಲ್ ಠಾಕೂರ್, ರವೀಂದ್ರ ಜಡೇಜಾ ಸ್ಥಾನದಲ್ಲಿ ರವಿಚಂದ್ರನ್ ಅಶ್ವಿನ್ ಆಡುವುದನ್ನು ನಿರೀಕ್ಷಿಸಲಾಗಿದೆ.
ಈ ಪೈಕಿ ಶ್ರಾದ್ಧೂಲ್, ರವಿಚಂದ್ರನ್ ಅಶ್ವಿನ್ ತಂಡಕ್ಕೆ ಆಗಮಿಸುವುದು ಬಹುತೇಕ ನಿಶ್ಚಿತ. ಆದರೆ ರೆಹಾನೆಗೆ ಅವರ ಹಿಂದಿನ ಸಾಧನೆಗಳನ್ನು ಗಮನದಲ್ಲಿಟ್ಟುಕೊಂಡು ಮತ್ತೊಂದು ಅವಕಾಶ ನೀಡಿದರೂ ಅಚ್ಚರಿಯಿಲ್ಲ. ಕಳೆದ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ಕಾರಣಕ್ಕೆ ಚೇತೇಶ‍್ವರ ಪೂಜಾರ ಡ್ರಾಪ್ ಆಗುವ ಸಾಧ‍್ಯತೆಯಿಲ್ಲ.