Publish Date: Wed, 01 Sep 2021 (16:38 IST)
Updated Date: Wed, 01 Sep 2021 (16:40 IST)
ಲಂಡನ್: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಗೆ ಮುನ್ನ ಟೀಂ ಇಂಡಿಯಾ ಕರ್ನಾಟಕ ಮೂಲದ ವೇಗಿ ಪ್ರಸಿದ್ಧ ಕೃಷ್ಣರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ.
ಇದುವರೆಗೆ ಸ್ಟಾಂಡ್ ಬೈ ಆಟಗಾರನಾಗಿ ಇಂಗ್ಲೆಂಡ್ ನಲ್ಲಿದ್ದ ಪ್ರಸಿದ್ಧ ಕೃಷ್ಣಗೆ ಈಗ ತಂಡದ ಸದಸ್ಯರಲ್ಲಿ ಸ್ಥಾನ ನೀಡಲಾಗಿದೆ. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಉದ್ದೇಶದಿಂದ ಯುವ ಬೌಲರ್ ನ್ನು ತಂಡಕ್ಕೆ ಸೇರಿಸಲು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಮನವಿ ಮಾಡಿತ್ತು.
ಹೀಗಾಗಿ ಈ ಸರಣಿಯಲ್ಲಿ ಪ್ರಸಿದ್ಧ ಚೊಚ್ಚಲ ಅವಕಾಶ ಪಡೆದರೂ ಅಚ್ಚರಿಯಿಲ್ಲ. ಈಗಾಗಲೇ ಸೀಮಿತ ಓವರ್ ಗಳಲ್ಲಿ ಅವರು ಟೀಂ ಇಂಡಿಯಾ ಪ್ರತಿನಿಧಿಸಿದ್ದಾರೆ.