Publish Date: Sun, 09 Feb 2020 (09:22 IST)
Updated Date: Sun, 09 Feb 2020 (09:24 IST)
ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡು ಪಂದ್ಯಗಳನ್ನು ಸೋತು ಸರಣಿ ಕಳೆದುಕೊಂಡ ಬಳಿಕ ಅಂತಿಮ ಪಂದ್ಯಕ್ಕೆ ಬದಲಾವಣೆ ಮಾಡಿಕೊಳ್ಳುವುದಾಗಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಅಂತಿಮ ಪಂದ್ಯದಲ್ಲಿ ಕಳೆದುಕೊಳ್ಳುವುದಕ್ಕೆ ಏನೂ ಇಲ್ಲ. ಹೀಗಾಗಿ ಕೆಲವು ಬದಲಾವಣೆ ಮಾಡುವುದಾಗಿ ಕೊಹ್ಲಿ ದ್ವಿತೀಯ ಏಕದಿನ ಪಂದ್ಯದ ಬಳಿಕ ಹೇಳಿಕೊಂಡಿದ್ದಾರೆ.
ಹೀಗಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಇದುವರೆಗೆ ಅವಕಾಶ ಸಿಗದ ಆಟಗಾರರಿಗೆ ಈ ಪಂದ್ಯದಲ್ಲಿ ಅವಕಾಶ ಸಿಗುವ ಸಾಧ‍್ಯತೆಯಿದೆ. ಅಂತಿಮ ಪಂದ್ಯ ಮಂಗಳವಾರ ನಡೆಯಲಿದೆ.