Publish Date: Tue, 17 Dec 2019 (09:31 IST)
Updated Date: Tue, 17 Dec 2019 (09:32 IST)
ಕೋಲ್ಕೊತ್ತಾ: ಪೌರತ್ವ ತಿದ್ದುಪಡಿ ಖಾಯಿದೆ ಜಾರಿಗೆ ತಂದ ಕೇಂದ್ರ ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ ಪ್ರತಿಭಟನೆಯ ಕಾವು ಪಶ್ಚಿಮ ಬಂಗಾಲದಲ್ಲಿ ಕಾವೇರಿದ್ದು, ಡಿಸೆಂಬರ್ 19 ರಂದು ಕೋಲ್ಕೊತ್ತಾದಲ್ಲಿ ನಡೆಯಲಿರುವ ಐಪಿಎಲ್ ಹರಾಜಿನ ಮೇಲೂ ತಟ್ಟುವ ಸಾಧ‍್ಯತೆಯಿದೆ.
ಡಿಸೆಂಬರ್ 19 ರಂದು ಕೋಲ್ಕೊತ್ತಾದಲ್ಲಿ ಈ ವರ್ಷದ ಐಪಿಎಲ್ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಆದರೆ ಈಗ ನಡೆಯುತ್ತಿರುವ ಪ್ರತಿಭಟನೆ ಇನ್ನಷ್ಟು ಜೋರಾದರೆ ಹರಾಜು ನಡೆಯುವ ಸ್ಥಳ ಬದಲಾಯಿಸಿದರೂ ಅಚ್ಚರಿಯಿಲ್ಲ.
ಆದರೆ ಸದ್ಯದ ಮಟ್ಟಿಗೆ ಕೋಲ್ಕೊತ್ತಾದಿಂದ ಸ್ಥಳಾಂತರಿಸುವ ಯೋಜನೆ ಮಾಡಿಲ್ಲ. ಆದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಏನಾಗುತ್ತದೆ ಎಂದು ಹೇಳಲಾಗದು. ಕಾದು ನೋಡುವ ತಂತ್ರ ಅನುಸರಿಸಲು ಬಿಸಿಸಿಐ ನಿರ್ಧರಿಸಿದೆ.