Publish Date: Tue, 30 Nov 2021 (09:40 IST)
Updated Date: Tue, 30 Nov 2021 (09:46 IST)
ಸಿಡ್ನಿ: ವಿಶ್ವವಿಖ್ಯಾತ ಸ್ಪಿನ್ನರ್ ಶೇನ್ ವಾರ್ನ್ ಬೈಕ್ ಚಲಾಯಿಸುವಾಗ ಅಪಘಾತಕ್ಕೀಡಾಗಿದ್ದಾರೆ. ಆದರೆ ಅದೃಷ್ಟವಶಾತ್ ಹೆಚ್ಚಿನ ಅಪಾಯವಾಗಿಲ್ಲ.
ಬೈಕ್ ಚಲಾಯಿಸುತ್ತಿದ್ದಾಗ ಜಾರಿ ಬಿದ್ದಿರುವ ಶೇನ್ ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಬಿದ್ದ ರಭಸಕ್ಕೆ ಸುಮಾರು 15 ಮೀ. ದೂರ ಬಿದ್ದಿದ್ದಾರೆ.
ಇದೀಗ ಮೈ ಕೈ ಅಸಾಧ್ಯ ನೋವಿದ್ದು, ಚಿಕಿತ್ಸೆಗೆ ವೈದ್ಯರನ್ನು ಸಂಪರ್ಕಿಸಲಿದ್ದಾರೆ. ಗಾಯ ಗಂಭೀರವಲ್ಲದ ಕಾರಣ, ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವೆ ನಡೆಯಲಿರುವ ಆಶಸ್ ಟೆಸ್ಟ್ ಸರಣಿಯಲ್ಲಿ ಕಾಮೆಂಟರಿ ಮಾಡಲಿದ್ದಾರೆ ಎನ್ನಲಾಗಿದೆ.