ಮುಂಬೈ: ಇತ್ತೀಚೆಗೆ ಟೀಂ ಇಂಡಿಯಾ ಪ್ರತೀ ಸರಣಿಗೂ ಒಬ್ಬೊಬ್ಬ ನಾಯಕನನ್ನು ಆಯ್ಕೆ ಮಾಡುತ್ತಿರುವ ಬಗ್ಗೆ ಬಿಸಿಸಿಐಯನ್ನು ನೆಟ್ಟಿಗರು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ.
ರೋಹಿತ್ ಶರ್ಮಾ ಟೀಂ ಇಂಡಿಯಾದ ಖಾಯಂ ನಾಯಕ ಎಂಬುದೇ ಎಲ್ಲರಿಗೂ ಮರೆತುಹೋಗಿದೆ. ಕಳೆದ ಎಂಟು ತಿಂಗಳಲ್ಲಿ ಟೀಂ ಇಂಡಿಯಾ 8 ನಾಯಕರನ್ನು ಕಂಡಿದೆ. ಇದೇ ಕಾರಣಕ್ಕೆ ತಂಡ ಸ್ಥಿರ ಪ್ರದರ್ಶನ ಕೊಡುವಲ್ಲಿ ವಿಫಲವಾಗಿದೆ.
ಗಲ್ಲಿ ಕ್ರಿಕೆಟ್ ತಂಡದಂತೆ ಸರಣಿಗೆ ಒಬ್ಬ ನಾಯಕನನ್ನು ಆಯ್ಕೆ ಮಾಡುತ್ತಿರುವ ಬಿಸಿಸಿಐ ತೀರ್ಮಾನಕ್ಕೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಪದೇ ಪದೇ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ರೆಸ್ಟ್ ನೀಡುವುದು, ಪಂದ್ಯವಾಡದೇ ಇದ್ದವರಿಗೂ ವಿಶ್ರಾಂತಿ ನೀಡುವುದು ಇತ್ಯಾದಿ ಕಾರಣಗಳಿಗೆ ಟೀಂ ಇಂಡಿಯಾ ಈಗ ಅತಂತ್ರವಾಗಿದೆ. ಪದೇ ಪದೇ ವೈಫಲ್ಯಕ್ಕೊಳಗಾಗುತ್ತಿರುವುದಕ್ಕೆ ಇದೂ ಕಾರಣವಾಗುತ್ತಿದೆ. ಈ ಕಾರಣಕ್ಕೆ ಬಿಸಿಸಿಐಯನ್ನು ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ.