Publish Date: Thu, 25 Jun 2020 (09:24 IST)
Updated Date: Thu, 25 Jun 2020 (09:26 IST)
ಮುಂಬೈ: ಲಾಕ್ ಡೌನ್ ನಿಂದಾಗಿ ಕ್ರಿಕೆಟ್ ಅಂಗಣಕ್ಕಿಳಿಯದೇ ಮೂರು ತಿಂಗಳಾಗಿವೆ. ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಆಡುವ ಬಯಕೆಯಾಗುತ್ತಿದೆಯಂತೆ.
ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಬ್ಯಾಟಿಂಗ್ ಮಾಡುವ ಫೋಟೋ ಪ್ರಕಟಿಸಿರುವ ಕೊಹ್ಲಿ ಮತ್ತೆ ಟೆಸ್ಟ್ ಆಡುವುದನ್ನು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.
‘ಟೆಸ್ಟ್ ಕ್ರಿಕೆಟ್ ಆಡುವಾಗ ಆಗುವಷ್ಟು ಖುಷಿ ಇನ್ನೊಂದರಲ್ಲಿ ಸಿಗಲ್ಲ. ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್ ಆಡುವ ಅವಕಾಶ ಸಿಗುವುದೇ ಸೌಭಾಗ್ಯ’ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.