Publish Date: Fri, 23 Sep 2022 (09:40 IST)
Updated Date: Fri, 23 Sep 2022 (09:54 IST)
ಕರಾಚಿ: ಇಂಗ್ಲೆಂಡ್ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ.
66 ಎಸೆತಗಳಲ್ಲಿ 110 ರನ್ ಚಚ್ಚಿದ ಬಾಬರ್ ತಂಡಕ್ಕೆ 10 ವಿಕೆಟ್ ಗಳ ಗೆಲುವು ಕೊಡಿಸಿದರು. ಜೊತೆಗೆ ಕಿರು ಮಾದರಿಯಲ್ಲಿ ಅತೀ ವೇಗವಾಗಿ 8000 ರನ್ ಪೂರೈಸಿದ ದಾಖಲೆ ಮಾಡಿದ್ದಾರೆ.
ಕೊಹ್ಲಿ 8000 ರನ್ ಪೂರ್ತಿ ಮಾಡಲು 243 ಇನಿಂಗ್ಸ್ ತೆಗೆದುಕೊಂಡಿದ್ದರು. ಬಾಬರ್ ಈ ದಾಖಲೆಯನ್ನು 218 ಇನಿಂಗ್ಸ್ ನಿಂದ ಪೂರ್ತಿಮಾಡಿದ್ದಾರೆ.