Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯರನ್ನು ಟ್ವಿಟರ್ ನಲ್ಲಿ ಟ್ರೋಲ್ ಮಾಡಿದ ಪಾಕ್ ನಟಿ ಸೆಹರ್ ಶಿನ್ವಾರಿಯನ್ನು ಭಾರತೀಯ ಅಭಿಮಾನಿಗಳು ಬೆಂಡೆತ್ತಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿಯೂ ಟೀಂ ಇಂಡಿಯಾ ಸೋತಿತ್ತು.ಈ ಸೋಲಿನ ಬಳಿಕ ಟ್ವೀಟ್ ಮಾಡಿದ್ದ ಹಾರ್ದಿಕ್ ನಾವು ಮುಂದಿನ ಪಂದ್ಯದಲ್ಲಿ ಸುಧಾರಿಸುತ್ತೇವೆ ಎಂದಿದ್ದರು.
ಅವರ ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದ ಸೆಹರ್ ಅಕ್ಟೋಬರ್ 23 ರಂದು ಪಾಕ್ ವಿರುದ್ಧದ ಪಂದ್ಯವನ್ನು ಸೋತು ಹೋಗಿ. ಆಗ ಇನ್ನಷ್ಟು ಸುಧಾರಿಸಬಹುದು ಎಂದು ನಗುವಿನ ಇಮೋಜಿ ಹಾಕಿ ವ್ಯಂಗ್ಯ ಮಾಡಿದ್ದರು. ಇದಕ್ಕೆ ಅನೇಕ ಭಾರತೀಯ ಅಭಿಮಾನಿಗಳು ಕಾಮೆಂಟ್ ಮಾಡಿದ್ದು, ಮೊದಲು ನಿಮ್ಮ ದೇಶದ ಆರ್ಥಿಕತೆ ಸುಧಾರಿಸುವುದು ಹೇಗೆ ಎಂದು ಯೋಚಿಸಿ ಎಂದರೆ ಮತ್ತೆ ಕೆಲವರು ಹಾಗಿದ್ದರೆ ನಿಮ್ಮ ಟೀಂ ಮೇಲೆ ನಿಮಗೇ ವಿಶ್ವಾಸವಿಲ್ಲ. ನೀವು ಗೆಲ್ಲಲು ಭಾರತ ತಂಡದ ಕಾಲು ಹಿಡಿಯಬೇಕಾಗಿದೆ ಎಂದು ಲೇವಡಿ ಮಾಡಿದ್ದಾರೆ.