Publish Date: Tue, 06 Sep 2022 (08:20 IST)
Updated Date: Tue, 06 Sep 2022 (09:00 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದಲ್ಲಿ ಮೊದಲ ಪಂದ್ಯದಲ್ಲೇ ಪಾಕ್ ವಿರುದ್ಧ ಸೋತ ಬಳಿಕ ಟೀಂ ಇಂಡಿಯಾ ಫೈನಲ್ ಹಾದಿ ಕಠಿಣವಾಗಿದೆ.
ಇದೀಗ ಟೀಂ ಇಂಡಿಯಾ ಸೂಪರ್ ಫೋರ್ ಹಂತದ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಮುಂದಿನ ಪಂದ್ಯಗಳಲ್ಲಿ ಭಾರತಕ್ಕೆ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳನ್ನು ಎದುರಿಸಬೇಕಿದೆ.
ಸದ್ಯಕ್ಕೆ ಸೂಪರ್ ಫೋರ್ ಹಂತದ ಅಂಕಪಟ್ಟಿಯಲ್ಲಿ ಭಾರತ ಶೂನ್ಯ ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದೀಗ ರೋಹಿತ್ ಪಡೆ ಎಲ್ಲಾ ಪಂದ್ಯಗಳನ್ನೂ ಭರ್ಜರಿ ಅಂತರದಲ್ಲಿ ಗೆದ್ದು ಅಂಕ ಸುಧಾರಿಸಿದರೆ ಮಾತ್ರ ಫೈನಲ್ ಗೆ ಅರ್ಹತೆ ಪಡೆಯಲಿದೆ.