ಸಚಿನ್ ತೆಂಡುಲ್ಕರ್ ಪುತ್ರನಿಗೆ ಮಾತ್ರ ಯಾಕೆ ಈ ಸ್ಪೆಷಲ್ ಟ್ರೀಟ್ ಮೆಂಟ್? ವಿವಾದದಲ್ಲಿ ಅರ್ಜುನ್!

Webdunia
ಗುರುವಾರ, 28 ಜೂನ್ 2018 (09:03 IST)
ಲಂಡನ್: ಅಂಡರ್ 19 ತಂಡಕ್ಕೆ ಆಯ್ಕೆಯಾಗಿರುವ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ಟೀಂ ಇಂಡಿಯಾ ಆಟಗಾರರಿಗೆ ಐರ್ಲೆಂಡ್ ನಲ್ಲಿ ನೆಟ್ ನಲ್ಲಿ ಬೌಲಿಂಗ್ ಮಾಡಿದ್ದು ಭಾರೀ ಸುದ್ದಿಯಾಗಿತ್ತು.
 

ಆದರೆ ಆ ವಿಚಾರವೇ ಇದೀಗ ವಿವಾದಕ್ಕೆ ಕಾರಣವಾಗಿದೆ. ಸಚಿನ್ ಪುತ್ರನಿಗೆ ಟೀಂ ಇಂಡಿಯಾ ಆಟಗಾರರಿಗೆ ಬೌಲಿಂಗ್ ಮಾಡಲು ಅವಕಾಶ ನೀಡಿದ್ದಷ್ಟೇ ಅಲ್ಲ, ಕೋಚ್ ರವಿಶಾಸ್ತ್ರಿಯಿಂದ ಟಿಪ್ಸ್ ಕೂಡಾ ಸಿಕ್ಕಿತ್ತು. ಈ ಫೋಟೋವನ್ನು ಬಿಸಿಸಿಐ ಟ್ವಿಟರ್ ನಲ್ಲಿ ಪ್ರಕಟಿಸಿದ್ದಕ್ಕೆ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.

ಅಂಡರ್ 19 ತಂಡದಲ್ಲಿ ಅರ್ಜುನ್ ಹೊರತಾಗಿ ಬೇರೆ ಆಟಗಾರರು ಇದ್ದರು. ಅವರಿಗೂ ಯಾಕೆ ಈ ಅವಕಾಶ ನೀಡಲಿಲ್ಲ? ಕೇವಲ ಸಚಿನ್ ಪುತ್ರನಿಗೆ ಮಾತ್ರ ಯಾಕೆ ಸುವರ್ಣಾವಕಾಶ ನೀಡಲಾಯಿತು ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ವಂಶಪಾರಂಪರ್ಯ ಎನ್ನುವುದು ಭಾರತೀಯ ಕ್ರಿಕೆಟ್ ಗೂ ಕಾಲಿಟ್ಟಿತೇ ಎಂದು ಕೆಲವರು ಖಾರವಾಗಿ ಪ್ರಶ್ನಿಸಿದ್ದಾರೆ.  ಹಿಂದೊಮ್ಮೆ ಸಚಿನ್ ಪುತ್ರನನ್ನು ಬಿಸಿಸಿಐ ತನ್ನ ಕಿರಿಯರ ತಂಡಕ್ಕೆ ಆಯ್ಕೆ ಮಾಡಿದಾಗ ಸಚಿನ್ ಪುತ್ರ ಎಂಬ ಕಾರಣಕ್ಕೆ ಆತನಿಗೆ ಅವಕಾಶ ನೀಡಲಾಗಿದೆ ಎಂದು ವಿವಾದವೆದ್ದಿತ್ತು. ಇದೀಗ ಮತ್ತೆ ಅಂತಹದ್ದೇ ವಿವಾದ ಸೃಷ್ಟಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2026: ತಿಲಕ್ ವರ್ಮ ಶತಕಕ್ಕೆ ಕುಣಿದು ಕುಣಿದು ಬಾರೇ ಸ್ಟೆಪ್ Video

IPL 2026: ಮುಂಬೈಗೆ ಶತಕ ಹೊಡೆದು ಟಾನಿಕ್ ನೀಡಿದ ತಿಲಕ್ ವರ್ಮ

ನನ್ನ ತಬ್ಕೊಂಡ್ ಬಿಟ್ರು ಕಣ್ಳಾ... ಪ್ರೀತಿ ಜಿಂಟಾ ಅಪ್ಪಿಕೊಂಡಿದ್ದಕ್ಕೆ ಅರ್ಷ್ ದೀಪ್ ಸಿಂಗ್ ರಿಯಾಕ್ಷನ್ Video

ಅಳುಮುಂಜಿ ವೈಭವ್ ಸೂರ್ಯವಂಶಿ, ಬ್ಯಾಟಿಂಗ್ ನಲ್ಲಿ ಮಾತ್ರ ರಾಕ್ಷಸ Video

IPL 2026: ಬಾಲ್ ಪಕ್ಕದಲ್ಲೇ ಬಿದ್ದರೂ ಹಿಡಿಯದೇ ನೋಡುತ್ತಾ ನಿಂತ ಶಶಾಂಕ್ ಸಿಂಗ್ Video

ಮುಂದಿನ ಸುದ್ದಿ
Show comments