ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಉಪನಾಯಕ ಅಜಿಂಕ್ಯಾ ರೆಹಾನೆ ಮತ್ತೆ ವೈಫಲ್ಯ ಅನುಭವಿಸಿದ್ದಾರೆ.
ಕೇವಲ 1 ರನ್ ಗೆ ವಿಕೆಟ್ ಒಪ್ಪಿಸಿದ ರೆಹಾನೆ ಕಳಪೆ ಫಾರ್ಮ್ ವಿಚಾರದಲ್ಲಿ ಚೇತೇಶ್ವರ ಪೂಜಾರಗೆ ಸಾಥ್ ನೀಡಿದ್ದಾರೆ. ಇಬ್ಬರೂ ಕಳೆದ ಕೆಲವು ಪಂದ್ಯಗಳಿಂದ ರನ್ ಗಳಿಸುವುದನ್ನೇ ಮರೆತಿದ್ದಾರೆ. ಹಾಗಿದ್ದರೂ ಇವರಿಗೆ ಪದೇ ಪದೇ ಅವಕಾಶ ಸಿಗುತ್ತಿರುವುದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು.
ಈಗ ಪೂಜಾರ-ರೆಹಾನೆ ಜೋಡಿ ವಿರುದ್ಧ ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕಳೆದ 13 ಪಂದ್ಯಗಳಿಂದ ರೆಹಾನೆ ಏಕೈಕ ಅರ್ಧಶತಕ ಗಳಿಸಿದ್ದು, 22 ಇನಿಂಗ್ಸ್ ಗಳಿಂದ 541 ರನ್ ಗಳಿಸಿದ್ದಾರಷ್ಟೇ.ಹಾಗೆ ನೋಡಿದರೆ ಪೂಜಾರ ರೆಹಾನೆಗಿಂತ ವಾಸಿ. ಪೂಜಾರ 13 ಪಂದ್ಯಗಳ 23 ಇನಿಂಗ್ಸ್ ಗಳಿಂದ 552 ರನ್ ಗಳಿಸಿದ್ದಾರೆ. ಇದರಲ್ಲಿ 5 ಅರ್ಧಶತಕ ಸೇರಿದೆ. ಹಾಗಿದ್ದರೂ ಈ ಇಬ್ಬರು ದಿಗ್ಗಜ ಬ್ಯಾಟ್ಸ್ ಮನ್ ಗಳಿಂದ ಅವರ ಖ್ಯಾತಿಗೆ ತಕ್ಕ ಆಟ ಬಂದಿಲ್ಲ.