Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನವದೆಹಲಿ: ಭಾರತ ಇಂಗ್ಲೆಂಡ್ ಪ್ರವಾಸ ಆರಂಭವಾಗಿದ್ದು, ಮೊದಲನೆಯದಾಗಿ ಐರ್ಲೆಂಡ್ ವಿರುದ್ಧ ಕಿರು ಮಾದರಿ ಕ್ರಿಕೆಟ್ ಸರಣಿ ಆರಂಭವಾಗಲಿದೆ.
ಈ ಸರಣಿಯಲ್ಲಿ ಐರ್ಲೆಂಡ್ ತಂಡದ ಪರ ಆಡುವ ಆಟಗಾರರ ಪೈಕಿ ಓರ್ವ ಭಾರತೀಯನೂ ಇದ್ದಾನೆ. ಪಂಜಾಬ್ ಸಂಜಾತ ಸಿಮಿ ಸಿಂಗ್ ಎಂಬಾತ ಟೀಂ ಇಂಡಿಯಾ ವಿರುದ್ಧ ಆಡಲಿರುವ ಐರ್ಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಪಂಜಾಬ್ ಮೂಲದ ಐರ್ಲೆಂಡ್ ನಿವಾಸಿಯಾಗಿರುವ ಸಿಮಿ ಸಿಂಗ್ ಆಫ್ ಸ್ಪಿನ್ ಬೌಲರ್. ಇದುವರೆಗೆ ಏಳು ಏಕದಿನ ಮತ್ತು ನಾಲ್ಕು ಟಿ20 ಪಂದ್ಯಗಳನ್ನಾಡಿದ್ದಾರೆ. ಇದೀಗ ತಮ್ಮ ತವರು ತಂಡದ ವಿರುದ್ಧವೇ ಆಡುವ ವಿಶೇಷ ಅನುಭವ ಅವರದ್ದಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.