ಮುಂಬೈ: ಮೊನ್ನೆಯಷ್ಟೇ ಸಾರ್ವಜನಿಕ ಪ್ರದೇಶದಲ್ಲಿ ಕಸ ಎಸೆದ ವ್ಯಕ್ತಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಕ್ಕೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾಗೆ ಲೀಗಲ್ ನೋಟಿಸ್ ಸಿಕ್ಕಿದೆ.
ಪ್ಲಾಸ್ಟಿಕ್ ಕಸ ಎಸೆದಿದ್ದಕ್ಕೆ ಅನುಷ್ಕಾ ತರಾಟೆಗೆ ತೆಗೆದುಕೊಳ್ಳುವ ದೃಶ್ಯದ ವಿಡಿಯೋವನ್ನು ಟ್ವಿಟರ್ ನಲ್ಲಿ ಪ್ರಕಟಿಸಿ ಅನುಷ್ಕಾ ಮತ್ತು ವಿರಾಟ್ ಸುದ್ದಿಯಾಗಿದ್ದರು. ಕೆಲವರು ಇದರ ಪರ ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಅಂತೂ ಈ ವಿಡಿಯೋ ಭಾರೀ ವೈರಲ್ ಆಗಿತ್ತು.
ಈ ವಿಡಿಯೋದಲ್ಲಿ ಕಸ ಎಸೆದ ವ್ಯಕ್ತಿ ಅರ್ಹಾನ್ ಸಿಂಗ್ ಎಂಬಾತ ಇದೀಗ ಇಬ್ಬರೂ ಸ್ಟಾರ್ ಗಳಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಇದಕ್ಕೆ ಇದೀಗ ವಿರಾಟ್-ಅನುಷ್ಕಾ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.