Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಯಾವ ಲಾಕ್ ಡೌನ್ ಅವಧಿಯಲ್ಲಿ ಎಷ್ಟು ಸೋಂಕಿತರು ಪಟ್ಟಿ ಇಲ್ಲಿದೆ ನೋಡಿ!

ಯಾವ ಲಾಕ್ ಡೌನ್ ಅವಧಿಯಲ್ಲಿ ಎಷ್ಟು ಸೋಂಕಿತರು ಪಟ್ಟಿ ಇಲ್ಲಿದೆ ನೋಡಿ!
ಬೆಂಗಳೂರು , ಬುಧವಾರ, 13 ಮೇ 2020 (09:16 IST)
ಬೆಂಗಳೂರು: ಕೊರೋನಾ ವಿರುದ್ಧ ಹೋರಾಡುತ್ತಿರುವ ಭಾರತ ಈಗಾಗಲೇ ಮೂರು ಲಾಕ್ ಡೌನ್ ಅವಧಿಗಳನ್ನು ಕಂಡಿದೆ. ಈ ಪೈಕಿ ಯಾವ ಲಾಕ್ ಡೌನ್ ಅವಧಿಯಲ್ಲಿ ಎಷ್ಟು ಸೋಂಕಿತರು ಹುಟ್ಟಿಕೊಂಡಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.


ಲಾಕ್ ಡೌನ್ 1 ಜಾರಿಯಾಗಿದ್ದು ಮಾರ್ಚ್ 25 ರಿಂದ ಏಪ್ರಿಲ್ 14 ರವರೆಗೆ. ಈ ಲಾಕ್ ಡೌನ್ ಆರಂಭವಾಗುವಾಗ ಸೋಂಕಿತರ ಸಂಖ್ಯೆ 657 ಇತ್ತು. ಮುಕ್ತಾಯದ ವೇಳೆಗೆ ಸೋಂಕಿತರ ಸಂಖ್ಯೆ 11487 ತಲುಪಿತ್ತು. ಅಂದರೆ 10,830 ಹೊಸ ಸೋಂಕಿತರು ಸೇರ್ಪಡೆಯಾಗಿದ್ದರು.

ಲಾಕ್ ಡೌನ್ 2 ಜಾರಿಯಾಗಿದ್ದು ಏಪ್ರಿಲ್ 15 ರಿಂದ ಮೇ 3 ರವರೆಗೆ. ಈ ಅವಧಿ ಆರಂಭವಾಗುವಾಗ ಸೋಂಕಿತರ ಸಂಖ್ಯೆ 12370 ಇತ್ತು. ಮುಕ್ತಾಯದ ವೇಳೆಗೆ 42505 ಆಗಿತ್ತು. ಅಂದರೆ ಈ ಅವಧಿಯಲ್ಲಿ ಒಟ್ಟಾರೆ ಹೊಸದಾಗಿ 30135 ಜನ ಸೋಂಕಿತರಾಗಿದ್ದರು.

ಲಾಕ್ ಡೌನ್ 3 ಆರಂಭವಾಗಿದ್ದು ಮೇ 4 ರಿಂದ 17 ರವರೆಗೆ ಇದು ಮುಂದುವರಿಯಲಿದೆ. ಈಗಾಗಲೇ ಈ ಪೈಕಿ ಎಂಟು ದಿನ ಕಳೆದುಹೋಗಿದೆ. 42643 ಇದ್ದ ಸೋಂಕಿತರ ಸಂಖ್ಯೆ ಈ ಎಂಟು ದಿನದಲ್ಲಿ 70 ಸಾವಿರದ ಗಡಿ ತಲುಪಿದೆ. ಈ ಲಾಕ್ ಡೌನ್ ಅವಧಿ ಮುಗಿಯುವ ವೇಳೆಗೆ ಅದು 1 ಲಕ್ಷ ತಲುಪಿದರೂ ಅಚ್ಚರಿಯಿಲ್ಲ.

ಈ ಅಂಕಿ ಅಂಶ ನೋಡಿದ ಮೇಲಾದರೂ ಕೇವಲ ಲಾಕ್ ಡೌನ್ ಒಂದೇ ಕೊರೋನಾ ನಿಯಂತ್ರಿಸಲು ಸಾಧ್ಯವಿಲ್ಲ. ನಾವು ಎಚ್ಚರಿಕೆಯಿಂದಿರುವುದು ಮುಖ್ಯ  ಎನ್ನುವುದು ಸ್ಪಷ್ಟವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇವಾಲಯ ತೆರೆಯದೇ ಆದಾಯವಿಲ್ಲ: ಅರ್ಚಕರ ಅಳಲು