ಕೋವಿಡ್-19 ಸೋಂಕು ಹಿನ್ನಲೆಯಲ್ಲಿ ಲಾಕ್‍ಡೌನ್ ಹಿನ್ನಲೆಯಲ್ಲಿ ವಲಸಿಗರು ತಮ್ಮ ರಾಜ್ಯ, ಜಿಲ್ಲೆ ಗಳಿಗೆ ವಲಸೆ ಹೋಗುವುದನ್ನು ಕೈಬಿಟ್ಟಿದ್ದಾರೆ.
ಮೂರನೇ ಹಂತದ ಲಾಕ್‍ಡೌನ್ ಸಮಯದಲ್ಲಿ ಒಂದಿಷ್ಟು ಸಡಿಲಿಕೆ ಘೋಷಣೆ ಮಾಡಿರುವುದರಿಂದ ಅನೇಕ ವಲಸಿಗರು ಈಗ ತಮ್ಮ ನಿರ್ಧಾರವನ್ನು ಬದಲಿಸಿಕೊಂಡಿದ್ದಾರೆ.
ಗಣಿನಾಡು ಬಳ್ಳಾರಿಯ ವಿಶಾಲ ನಗರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಾಸವಾಗಿರುವ ಉತ್ತರ ಭಾರತದ ಕರಕುಶಲ ಕರ್ಮಿಗಳ ಐದು ಜನರ ಗುಂಪೊಂದು ಮದುವೆ ಮೊದಲಾದ ಸಮಾರಂಭಗಳಲ್ಲಿ ಮಹಿಳೆಯರ ವಸ್ತ್ರಗಳಿಗೆ ಕಸೂತಿ ಕಲೆ ಮಾಡುತ್ತಾ ತಮ್ಮ ದುಡಿಮೆ ಕಂಡು ಕೊಂಡಿದ್ದರು.
ಆದರೆ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಲಾಕ್ ಡೌನ್ ಜಾರಿ ಬಳಿಕ ಇವರಿಗೆ ಕೆಲಸ ಇಲ್ಲದಂತಾಗಿತ್ತು.
ದುಡಿದಿಟ್ಟುಕೊಂಡಿದ್ದ ಹಣದಲ್ಲಿ ಕೆಲಸವಿಲ್ಲದೆ ಒಂದುವರೆ ತಿಂಗಳು ಬದುಕಿದ್ದರು. ಲಾಕ್ ಡೌನ್ ಯಾವಾಗ ಮುಗಿಯುತ್ತೆ, ನಮಗೆ ದುಡಿಮೆ ಸಿಗುತ್ತೋ ಎಂದು ತಮ್ಮ ಊರುಗಳಿಗೆ ತೆರಳು ನಿರ್ಧರಿಸಿದ್ದರು.
ಆದರೆ ಮೂರನೇ ಹಂತದ ಲಾಕ್ ಡೌನ್ ಸಮಯದಲ್ಲಿ ಒಂದಿಷ್ಟು ಸಡಿಲಿಕೆ ಮಾಡಿದ್ದರಿಂದ. ಮತ್ತೆ ಜನರಿಂದ ಅವರಿಗೆ ಒಂದಿಷ್ಟು ಕೆಲಸ ದೊರೆತಿದ್ದು, ವಲಸೆ ಹೋಗುವುದನ್ನು ಕೈಬಿಟ್ಟಿದ್ದೇವೆ ಎಂದು ಸಂತೂ ಬಾರಿಕ್, ಎಸ್.ಕೆ.ಎಂತಜುಲ್ ಹೇಳಿದ್ದಾರೆ.