Publish Date: Thu, 07 May 2020 (10:03 IST)
Updated Date: Thu, 07 May 2020 (10:04 IST)
ವಿಶಾಖಪಟ್ಟಣ: ಲಾಕ್ ಡೌನ್ ಸಡಿಲಿಕೆಯಾದಂತೆ ಮದ್ಯದಂಗಡಿ ತೆರೆಯುವ ಸರ್ಕಾರದ ನಿರ್ಧಾರದಿಂದ ವಿಶಾಖಪಟ್ಟಣದಲ್ಲಿ ಶಿಕ್ಷಕರಿಗೆ ಹೊಸ ಕೆಲಸ ಸಿಕ್ಕಿದೆ!
ಕರ್ನಾಟಕದಂತೇ ವಿಶಾಖಪಟ್ಟಣದಲ್ಲೂ ಮದ್ಯದಂಗಡಿ ತೆರೆದ ಬೆನ್ನಲ್ಲೇ ಪಾನಪ್ರಿಯರು ಎಣ್ಣೆ ಬಾಟಲಿಗಾಗಿ ನೂಕು ನುಗ್ಗಲು ನಡೆಸಿದ್ದಾರೆ. ಇವರನ್ನು ನಿಯಂತ್ರಿಸಲು ಇಲ್ಲಿನ ಸರ್ಕಾರಿ ಶಿಕ್ಷಕರನ್ನು ಬಳಸಲಾಗುತ್ತಿದೆ.
ಪೊಲೀಸರ ಜತೆ ಜನರ ನೂಕು ನುಗ್ಗಲು ನಿಭಾಯಿಸಲು ಶಿಕ್ಷಕರನ್ನು ಸ್ವಯಂ ಸೇವಕರಾಗಿ ಬಳಸಲಾಗಿದೆ. ಈ ಶಿಕ್ಷಕರು ಮದ್ಯಕ್ಕಾಗಿ ಕ್ಯೂ ನಿಂತ ಪಾನಪ್ರಿಯರಿಗೆ ಟೋಕನ್ ಕೊಡುವ ಕೆಲಸ ಮಾಡುತ್ತಿದ್ದಾರೆ.