Publish Date: Tue, 05 May 2020 (09:25 IST)
Updated Date: Tue, 05 May 2020 (09:27 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಕಳೆದ ಕೆಲವು ದಿನಗಳಿಂದ ಮದ್ಯಪ್ರಿಯರಿಗೆ ಮದ್ಯದಂಗಡಿ ತೆರೆಯದೇ ಏನೋ ಕಳೆದುಕೊಂಡ ಫೀಲಿಂಗ್.. ಆದರೆ ಸೋಮವಾರದಿಂದ ಮದ್ಯದಂಗಡಿ ಓಪನ್ ಆಗುತ್ತಿರುವ ಸುದ್ದಿ ಕೇಳಿ ನಿಧಿ ಸಿಕ್ಕಿದ ಹಾಗಾಗಿತ್ತು.
ಟವೆಲ್ ಹಾಕಿ ಬಾರ್ ಮುಂದೆ ತಮ್ಮ ಆಸನ ಕಾದಿರಿಸಿ ಒಂದೊಂದು ಬಾಟಲ್ ತೆಗೆದುಕೊಂಡು ಹೋದ ಖುಷಿಯೇನು, ಹುಡುಗಿಯರೂ ತಾ ಮುಂದು ಎಂಬಂತೆ ಎತ್ತಿಕೊಂಡು ಹೋಗಿದ್ದೇನು?.. ಅಬ್ಬಾ ಒಂದಾ.. ಎರಡಾ..!
ಈ ರೀತಿ ಬಹಳ ದಿನಗಳ ನಂತರ ತೀರ್ಥ ಸಿಕ್ಕಿದ ಖುಷಿಯಲ್ಲಿ ಕೆಲವರು ಎರ್ರಾಬಿರ್ರಿ ಎಣ್ಣೆ ಹೊಡೆದು ರಸ್ತೆ ಮಧ್ಯೆ ತೂರಾಡಿದರೆ ಮತ್ತೆ ಕೆಲವರು ಅಂಗಿ ಬಿಚ್ಚಿ ರಸ್ತೆ ಮಧ್ಯೆಯೇ ಅಂಗದರ್ಶನ ಮಾಡಿದ ಘಟನೆಗಳೂ ನಡೆದಿವೆ. ಅಂತೂ ಮದ್ಯದಂಗಡಿ ತೆರೆಯಲು ಹೇಳಿದ ಒಂದೇ ದಿನಕ್ಕೆ ಈ ಅವಸ್ಥೆ!