Publish Date: Fri, 01 May 2020 (11:20 IST)
Updated Date: Fri, 01 May 2020 (11:22 IST)
ಜೈಪುರ: ದೇಶವೇ ಕೊರೋನಾವೈರಸ್ ನಿಂದ ಪಾರಾಗುವುದು ಹೇಗೆ ಎಂದು ಯೋಚಿಸುತ್ತಿದ್ದರೆ, ರಾಜಸ್ಥಾನದ ಕಾಂಗ್ರೆಸ್ ಶಾಸಕರೊಬ್ಬರು ವಿಚಿತ್ರ ಪರಿಹಾರ ನೀಡಿದ್ದಾರೆ!
ರಾಜಸ್ಥಾನದ ಕಾಂಗ್ರೆಸ್ ಶಾಸಕ ಭರತ್ ಸಿಂಗ್ ಮದ್ಯಪಾನ ಮಾಡಿದ್ರೆ ಕೊರೋನಾ ಸೋಂಕು ಗಂಟಲಿನಲ್ಲಿ ಉಳಿಯಲ್ಲ ಎಂಬ ವಿಚಿತ್ರ ಹೇಳಿಕೆ ನೀಡಿದ್ದಾರೆ.
ಆಲ್ಕೋಹಾಲ್ ಅಂಶವಿರುವ ಹ್ಯಾಂಡ್ ವಾಶರ್ ನಿಂದ ಕೈ ತೊಳೆದುಕೊಂಡರೆ ಕೊರೋನಾ ಓಡಿ ಹೋಗುತ್ತದಂತೆ. ಇನ್ನು ಆಲ್ಕೋಹಾಲ್ ಸೇವಿಸಿದರೆ ಗಂಟಲಿನಲ್ಲಿ ಕೊರೋನಾ ಸೋಂಕು ಉಳಿಯಲು ಸಾಧ‍್ಯವೇ ಎನ್ನುವುದು ಶಾಸಕರ ವಾದ! ಹೀಗಾಗಿ ಸರ್ಕಾರ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ಕೊಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.