Publish Date: Fri, 01 May 2020 (09:32 IST)
Updated Date: Fri, 01 May 2020 (09:33 IST)
ನವದೆಹಲಿ: ಕೊರೋನಾವೈರಸ್ ಟ್ರ್ಯಾಕ್ ಮಾಡುವ ಆರೋಗ್ಯ ಸೇತು ಆಪ್ ಇನ್ನು ಮುಂದೆ ನಿಮ್ಮ ಮೊಬೈಲ್ ನಲ್ಲಿ ಪ್ರಿ ಇನ್ ಸ್ಟಾಲ್ ಆಗಿರಲಿದೆ. ಕೇಂದ್ರ ಸರ್ಕಾರ ಈ ಆಪ್ ಬಿಡುಗಡೆ ಮಾಡಿತ್ತು.
ಲಾಂಚ್ ಮಾಡಿದ ಕೇವಲ 13 ದಿನಗಳಲ್ಲಿ ಅತ್ಯಂತ ವೇಗವಾಗಿ ಅತೀ ಹೆಚ್ಚು ಇನ್ ಸ್ಟಾಲ್ ಆದ ಆಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಆರೋಗ್ಯ ಸೇತು ಆಪ್ ಇನ್ನು ಮುಂದೆ ಬರಲಿರುವ ಹೊಸ ಫೋನ್ ಗಳಲ್ಲಿ ಮೊದಲೇ ಇನ್ ಸ್ಟಾಲ್ ಆಗಿರಲಿದೆ.
ಇದು ಆಂಡ್ರಾಯ್ಡ್ ಮತ್ತು ಐಒಎಸ್ ಫೋನ್ ಗಳಲ್ಲೂ ಇನ್ ಸ್ಟಾಲ್ ಮಾಡುವಂತಹ ಆಪ್ ಆಗಿದ್ದು, ಕೊರೋನಾ ಬಗ್ಗೆ ಮುನ್ನೆಚ್ಚರಿಕೆ ಕೊಡುವ ಸಹಾಯ ಸೇತುವಾಗಿದೆ.