ನವದೆಹಲಿ: ಕೊರೋನಾ ಕುರಿತಾಗಿ ಹಲವರು ಹಲವು ರೀತಿಯ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಇದೀಗ ರಷ್ಯಾದ ವಿಜ್ಞಾನಿಗಳು ನೀರು ಕುದಿಯುವ ಉಷ್ಣತೆಯಲ್ಲಿದ್ದರೆ ಕೊರೋನಾ ವೈರಾಣುವನ್ನು ಕೊಲ್ಲಬಹುದು ಎಂದು ಕಂಡುಕೊಂಡಿದ್ದಾರೆ.
ಕುದಿಯುವಷ್ಟು ನೀರಿನ ತಾಪಮಾನವಿದ್ದರೆ ಅದರಲ್ಲಿ ಕೊರೋನಾ ವೈರಸ್ ಸಾಯುತ್ತದೆ ಎಂದು ರಷ್ಯಾದ ಅಧ್ಯಯನಕಾರರು ಕಂಡುಕೊಂಡಿದ್ದಾರೆ.
ಕೊಠಡಿಯ ಉಷ್ಣತೆಯಲ್ಲಿ 24 ಗಂಟೆಯ ಅವಧಿಯಲ್ಲಿ ಕೊರೋನಾ ವೈರಸ್ ಶೇ. 90 ರಷ್ಟು ನಾಶವಾಗಬಹುದು. ಸಮುದ್ರದ ನೀರಿನಲ್ಲಿ ಅಥವಾ ಶುಭ್ರ ನೀರಿನಲ್ಲಿ ವೈರಾಣು ಹೆಚ್ಚಾಗುವುದಿಲ್ಲ. ಅದೇ ರೀತಿ ಸ್ಟೈನ್ ಲೆಸ್ ಸ್ಟೀಲ್ ಪಾತ್ರೆ, ಗ್ಲಾಸ್, ಪ್ಲಾಸ್ಟಿಕ್ ವಸ್ತುಗಳಲ್ಲಿ ವೈರಾಣು 48 ಗಂಟೆ ಜೀವಂತವಾಗಿರಬಹುದು ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.