ನವದೆಹಲಿ: ಇಂದು ಸಂಸತ್ತಿನಲ್ಲಿ ಈ ಸಾಲಿನ ಬಜೆಟ್ ಮಂಡನೆಯಾಗಲಿದ್ದು, ಹಣಕಾಸು ಸಚಿವ ಅರುಣ್ ಜೇಟ್ಲಿಗೆ ಅತ್ಯಂತ ಕಠಿಣ ಬಜೆಟ್ ಆಗಲಿದೆ.
ಏರುತ್ತಿರುವ ಜನ ಸಂಖ್ಯೆಯ ಜತೆಗೆ ಹಣಕಾಸು ಮಿತವ್ಯಯಕ್ಕೆ ಆದ್ಯತೆ ನೀಡುವ ಸವಾಲು ಸಚಿವರ ಮುಂದಿದೆ. ಜತೆಗೆ ಹಲವು ಹೊಸ ಬಗೆಯ ಆರ್ಥಿಕ ನೀತಿಗಳಿಗೆ ಸರಿ ಹೊಂದುವಂತಹ ಯೋಜನೆಗಳನ್ನು ರೂಪಿಸುವ ಸವಾಲು ಸಚಿವರಿಗೆ ಎದುರಾಗಲಿದೆ.
ಅದರ ಜತೆಗೆ ಮೂರು ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗಲಿದ್ದು, ತದನಂತರ ಲೋಕಸಭೆ ಚುನಾವಣೆಗೆ ತಯಾರಾಗಬೇಕಿದೆ. ಇದೆಲ್ಲದಕ್ಕೂ ಅನುಕೂಲಕಾರಿಯಾದಂತಹ ಜನಪ್ರಿಯ ಬಜೆಟ್ ಜೇಟ್ಲಿ ಮಂಡಿಸಬೇಕಿದೆ.
ಹೀಗಾಗಿ ಮೂಲಭೂತ ಸೌಕರ್ಯಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ರಸ್ತೆಗಳ ನಿರ್ಮಾಣ ಇತ್ಯಾದಿ ಜನೋಪಯೋಗಿ ಯೋಜನೆಗಳಿಗೆ ಬಜೆಟ್ ನಲ್ಲಿ ಕೇಂದ್ರ ಹೆಚ್ಚು ಒತ್ತು ನೀಡಬೇಕಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ