Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಟಿ ವಿದ್ಯಾಬಾಲನ್ ಗರ್ಭಿಣಿಯಂತೆ ನಟಿಸುತ್ತಿದಿದ್ದು ಯಾಕೆ ಗೊತ್ತಾ…?

ನಟಿ ವಿದ್ಯಾಬಾಲನ್ ಗರ್ಭಿಣಿಯಂತೆ ನಟಿಸುತ್ತಿದಿದ್ದು ಯಾಕೆ ಗೊತ್ತಾ…?
ಮುಂಬೈ , ಭಾನುವಾರ, 24 ಜೂನ್ 2018 (07:54 IST)
ಮುಂಬೈ : ಉತ್ತಮ ನಟಿ ಎಂದು ಹೆಸರು ಮಾಡಿರುವ ಬಾಲಿವುಡ್ ನಟಿ ವಿದ್ಯಾಬಾಲನ್ ಅವರು ಹಲವು ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದ್ದಾರೆ. ಇಂತಹ ನಟಿ ರೀಲ್ ಲೈಫ್ ನಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲಿಯೂ ಕೂಡ ಒಬ್ಬ ಗರ್ಭಿಣಿಯಂತೆ ನಟಿಸಿದ್ದಾರಂತೆ.


ಹೌದು ನಟಿ ವಿದ್ಯಾಬಾಲನ್ ಅವರು ರೈಲಿನಲ್ಲಿ ಸೀಟ್ ಪಡೆಯಲು ಗರ್ಭಿಣಿಯಂತೆ ನಟಿಸುತ್ತಿದ್ದಾರಂತೆ.  ಈ ಬಗ್ಗೆ ಸ್ವತಃ  ವಿದ್ಯಾಬಾಲನ್ ಅವರೇ ಇತ್ತೀಚೆಗಷ್ಟೇ  ನಡೆದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ‘ನಾನು ಯುವತಿಯಾಗಿದ್ದಾಗ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಈ ಸಂದರ್ಭ ರೈಲಿನಲ್ಲಿ ಸೀಟು ಪಡೆಯಲೆಂದು ನಾನು ಗರ್ಭಿಣಿಯಂತೆ ನಟಿಸುತ್ತಿದ್ದೆ. ರೈಲಿನಲ್ಲಿ ಸೀಟ್ ಪಡೆಯಲು ಇದೊಂದು ಸುಲಭ ಉಪಾಯವಾಗಿತ್ತು. ಅದು ಸಕ್ಸೆಸ್ ಕೂಡ ಆಗಿದೆ. ಹೀಗಾಗಿ ನಾನು ವಾರಕ್ಕೆ ಒಂದು ಅಥವ ಎರಡು ಬಾರಿಯಾದರೂ, ಗರ್ಭಿಣಿಯಂತೆ ನಟಿಸುತ್ತಿದ್ದೆ’  ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಂಜಯ್ ದತ್ ಜೊತೆಗೆ ರಣಬೀರ್ ಕಪೂರ್ ಕ್ಲೋಸ್ ಆಗಿರುವುದು ಇವರಿಗೆ ಇಷ್ಟವಿರಲಿಲ್ಲವಂತೆ