ಮುಂಬೈ : ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರ ಸಲಹೆಗಾರರಾದ ಸಂಜಯ್ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಎಂಬ ಪುಸ್ತಕ ಬರೆದಿದ್ದು, ಇದೀಗ ಈ ಪುಸ್ತಕದಲ್ಲಿರುವ ಕಥೆ ಸಿನಿಮಾವಾಗಿ ಬಾಲಿವುಡ್ ಅಂಗಳದಿಂದ ಮೂಡಿಬರುತ್ತಿದೆ.
ವಿಜಯ್ ರತ್ನಾಕರ್ ಗುಟ್ಟೆ ಅವರು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಮನ್ ಮೋಹನ್ ಸಿಂಗ್ ಪಾತ್ರವನ್ನು ಬಾಲಿವುಡ್ ನ ಹಿರಿಯ ನಟ ಅನುಪಮ್ ಖೇರ್ ಅವರು ನಿರ್ವಹಿಸುತ್ತಿದ್ದು, ಇದೀಗ ಮನ್ ಮೋಹನ್ ಸಿಂಗ್ ಅವರ ಪತ್ನಿ ಗುರ್ ಶರಣ್ ಕೌರ್ ಅವರ ಪಾತ್ರವನ್ನು ನಟಿ ದಿವ್ಯಾ ಸೇತ್ ಶಾ ಅವರು ನಿರ್ವಹಿಸಿದ್ದಾರಂತೆ. ಈ ಬಗ್ಗೆ ಅನುಪಮ್ ಖೇರ್ ಫೋಟೋವೊಂದನ್ನು ಶೇರ್ ಮಾಡಿ ಚಿತ್ರದಲ್ಲಿ ದಿವ್ಯಾ ಸೇತ್ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದಾರೆ. ಗುರುಶರಣ್ ಕೌರ್ (ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರ ಪತ್ನಿ ) ಅವರ ಪಾತ್ರವನ್ನು ದಿವ್ಯಾ ಸೇತ್ ನಿರ್ವಹಿಸಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ