ಮುಂಬೈ : ನಟಿ ಎಂದ ತಕ್ಷಣ ಅವರ ಜೊತೆ ಅಸಭ್ಯವಾಗಿ ವರ್ತಿಸಿ ಅವರನ್ನು ಮಂಚಕ್ಕೆ ಕರೆವ ಅದೆಷ್ಟೋ ಕಾಮುಕರ ಬಗ್ಗೆ ನಾವು ಹಲವು ಬಾರಿ ಕೇಳಿರುತ್ತೇವೆ. ಅದೇರೀತಿ ಇತ್ತಿಚೆಗೆ ಬಾಲಿವುಡ್ ನಟಿ ಸೋಫಿಯಾ ಹಯಾತ್ ಅವರ ಜೊತೆ ಒಬ್ಬ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದು, ಆತನಿಗೆ ಸೋಫಿಯಾ ತಕ್ಕ ಶಾಸ್ತಿ ಮಾಡಿದ್ದಾರೆ.
ಇತ್ತಿಚಿಗೆ ನಟಿ ಸೋಫಿಯಾ ಹಯಾತ್ ಅವರಿಗೆ ವ್ಯಕ್ತಿಯೊಬ್ಬ ಒಂದು ರಾತ್ರಿ ಕಳೆಯಲು 20 ಲಕ್ಷ ರೂ. ಆಫರ್ ನೀಡಿ ಮೇಸೆಜ್ ಮಾಡಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಸೋಫಿಯಾ ಅವರು 20 ಲಕ್ಷ ಅಲ್ಲ 20 ಕೋಟಿ ರೂ. ಇದ್ದರೂ ನನ್ನನ್ನು ಖರೀದಿಸಲು ಸಾಧ್ಯವಿಲ್ಲ. ಆ 20 ಲಕ್ಷ ರೂ.ನಲ್ಲಿ ನಿನ್ನನ್ನು ಖರೀದಿಸಲಾಗುತ್ತಾ ಎಂದು ನಿನ್ನ ತಾಯಿಗೆ ಕೇಳಿ ನೋಡು ಎಂದು ಕೋಪದಿಂದ ಉತ್ತರಿಸಿದ್ದಾರೆ. ಹಾಗೇ ಆತ ಮಾಡಿದ ಮೆಸೆಜ್ ಅನ್ನು ಸ್ಕ್ರೀನ್ ಶಾಟ್ ತೆಗೆದುಕೊಂಡು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಆ ವ್ಯಕ್ತಿಯನ್ನು ಎಲ್ಲರ ಮುಂದೆ ತಂದು ಈ ಮೂಲಕ ಆತನಿಗೆ ಒಳ್ಳೆಯ ಪಾಠ ಕಲಿಸಿದ್ದೀರಿ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ