Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಷರತ್ತೊಂದರ ಮೇರೆಗೆ ಇಂದು ಹೊಸ ಚಿತ್ರಗಳ ಪ್ರದರ್ಶನಕ್ಕೆ ಅನುಮತಿ ನೀಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

ಷರತ್ತೊಂದರ ಮೇರೆಗೆ ಇಂದು ಹೊಸ ಚಿತ್ರಗಳ ಪ್ರದರ್ಶನಕ್ಕೆ ಅನುಮತಿ ನೀಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
ಬೆಂಗಳೂರು , ಗುರುವಾರ, 15 ಮಾರ್ಚ್ 2018 (06:09 IST)
ಬೆಂಗಳೂರು : ಉಪಗ್ರಹ ಆಧಾರಿತ ಚಿತ್ರ ಪ್ರದರ್ಶನಕ್ಕೆ ದುಬಾರಿ ಶುಲ್ಕ ವಿಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ಚಿತ್ರಗಳ ಬಿಡುಗಡೆಯನ್ನು ರದ್ದು ಮಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈಗ ಷರತ್ತೊಂದರ ಮೇರೆಗೆ ಗುರುವಾರ (ಇಂದು)ದಿಂದ ಹೊಸ ಚಿತ್ರಗಳ ಪ್ರದರ್ಶನಕ್ಕೆ ಅನುಮತಿ ನೀಡಿದೆ.


ಈ ಬಗ್ಗೆ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ಅವರು,’ ದರ ನಿಗಧಿ ಕುರಿತಂತೆ ಕಳೆದ ಮೂರು ತಿಂಗಳಿನಿಂದಲೂ ಮಾತುಕತೆ ನಡೆಸಲಾಗುತ್ತಿತ್ತು. ಮಂಗಳವಾರ ಬೆಳಗ್ಗೆಯಿಂದ ಸಂಜೆಯವರೆಗೂ ನಡೆದ ಮಾತುಕತೆಯಲ್ಲಿ, ಯುಎಫ್, ಕ್ಯೂಬ್ಗ ಸಂಬಂಧಿಸಿದವರು ಹದಿನೈದು ದಿನಗಳ ಕಾಲಾವಕಾಶ ಕೇಳಿದರು. ನಮ್ಮ ಸಿಇಓ ಬಳಿ ಮಾತನಾಡಲು ಸಮಯಬೇಕು, ಆ ಬಳಿಕ ನಾವು ನಿಮ್ಮ ಬೇಡಿಕೆ ಕುರಿತು ಒಂದು ತೀರ್ಮಾನಕ್ಕೆ ಬರಬಹುದು ಎಂದು ಕೇಳಿದ್ದಕ್ಕೆ ಮಾರ್ಚ್ 30ರವರೆಗೆ ಗಡುವು ಕೊಡಲಾಗಿದೆ. ಹೀಗಾಗಿ, ಬಿಡುಗಡೆಗೆ ಸಿದ್ಧವಾಗಿರುವ ಚಿತ್ರಗಳು ಈ ವಾರ ತೆರೆಗೆ ಬರಲಿವೆ. ಯುಎಫ್‌ಓ, ಕ್ಯೂಬ್ ವಿಧಿಸಿರುವ ಈಗಿನ ದರದಲ್ಲೇ ಚಿತ್ರಗಳು ಬಿಡುಗಡೆಯಾಗಲಿವೆ. ಹದಿನೈದು ದಿನಗಳ ನಂತರ ನಮ್ಮ ಬೇಡಿಕೆಗೆ ಅವರು ಒಪ್ಪದೇ ಇದ್ದರೆ, ಬಿಡುಗಡೆಯಾಗಿರುವ ಚಿತ್ರಗಳಿಗೆ ಶೇ.50 ರಷ್ಟು ಹಣ ಹಿಂದಕ್ಕೆ ಕೊಡುವ ಕುರಿತು ಮಾತುಕತೆ ನಡೆದಿದೆ. ಒಂದು ವೇಳೆ ಸಮಸ್ಯೆ ಬಗೆಹರಿಯದೇ ಇದ್ದರೆ, ನಾವು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಈಗಾಗಲೇ ಒಂದು ಕಂಪೆನಿ ಜೊತೆಗೆ ಮಾತುಕತೆ ಕೂಡ ನಡೆದಿದೆ’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಇಲಿಯಾನ ಅವರು ಪತ್ರಕರ್ತರ ಮೇಲೆ ಕೋಪಗೊಂಡು ಹೀಗ್ಯಾಕೆ ಹೇಳಿದ್ರು!