ಮುಂಬೈ : ಆಗಾಗ ವಿವಾದಗಳ ಮೂಲಕವೇ ಸುದ್ದಿಯಾಗುತ್ತಿರುವ ಖ್ಯಾತ ಕಾಮಿಡಿಯನ್ ಕಪಿಲ್ ಶರ್ಮಾ ಅವರ ವಿರುದ್ಧ ಇದೀಗ ಮುಂಬೈ ಮೂಲದ ಪತ್ರಕರ್ತರೊಬ್ಬರು ದೂರು ನೀಡಿದ್ದಾರೆ.
ಈ ಹಿಂದೆ ಕಪಿಲ್ ಶರ್ಮಾ ಅವರು ಪತ್ರಕರ್ತ ವಿಕ್ಕಿ ಲಲ್ವಾನಿ ತಮ್ಮ ಬಗ್ಗೆ ಮಾನಹಾನಿಕರ ವರದಿ ಮಾಡಿದ್ದಲ್ಲದೇ ಹಣ ಸುಲಿಗೆ ಮಾಡಲು ಬೆದರಿಕೆ ಕೂಡ ಒಡ್ಡಿರುವುದಾಗಿ ಅವರ ವಿರುದ್ಧ ದೂರು ನೀಡಿದ್ದರು. ಆದರೆ ಇದೀಗ ಕಪಿಲ್ ಶರ್ಮಾ ಅವರು ಬೆದರಿಕೆಯೊಡ್ಡಿರುವುದಾಗಿ ಹಾಗೂ ಕೀಳುಮಟ್ಟದ ಭಾಷೆಯಲ್ಲಿ ತನ್ನನ್ನು ನಿಂದಿಸಿರುವುದಾಗಿ ಪತ್ರಕರ್ತ ವಿಕ್ಕಿ ಲಲ್ವಾನಿ ಅವರು ಕಪಿಲ್ ವಿರುದ್ಧ ಪೊಲೀಸರಲ್ಲಿ ದುರು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಪತ್ರಕರ್ತ ವಿಕ್ಕಿ ಲಲ್ವಾನಿ ಅವರು,’’ ಶುಕ್ರವಾರ ಸಂಜೆ ನನಗೆ ಕಪಿಲ್ ಶರ್ಮಾ ಕರೆ ಮಾಡಿ ಕೀಳುಮಟ್ಟದ ಭಾಷೆಯಲ್ಲಿ ಮಾತನಾಡಿದರು. ಈ ಕರೆಯ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನನಗೆ ಹಲವರು ಕರೆ ಮಾಡಿದ್ದು, ಬೆಂಬಲ ವ್ಯಕ್ತಪಡಿಸಿದ್ದಾರೆ" ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ