1 ರಿಂದ 5 ನೇ ತರಗತಿಯವರೆಗೆ ಎಲ್ಲಾ ಶಾಲೆಗಳಲ್ಲಿಯೂ ಕನ್ನಡ ಕಲಿಸಲೇಬೇಕು ಎನ್ನುವ ನಿಯಮವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಕನ್ನಡ ಭಾಷೆಯ ಕಲಿಕೆಯನ್ನು ಉತ್ತೇಜಿಸಲು ಈ ನಿಯಮವನ್ನು ಜಾರಿಗೊಳಿಸಿದ್ದು ಇದು ಕನ್ನಡಿಗೇತರ ಪೋಷಕರಿಗೆ ಸಮಸ್ಯೆಯನ್ನು ತಂದೊಡ್ಡಿದೆ.
ಹಲವು ಜನರು ತಮ್ಮ ಮಕ್ಕಳ ಅಂಕಗಳ ಕುರಿತು ಚಿಂತಿತರಾಗಿದ್ದು ಅವರನ್ನು ಟ್ಯೂಶನ್‌ಗಳಿಗೆ ಕಳುಹಿಸಲು ಪ್ರಾರಂಭಿಸಿದ್ದಾರೆ. ಕೆಲವು ಪೋಷಕರು ಕನ್ನಡವನ್ನು ಕಲಿಯಲು ಆನ್‌ಲೈನ್ ಕೋರ್ಸ್‌ಗಳನ್ನು ಸೇರಿಕೊಂಡಿದ್ದಾರೆ. ಕನ್ನಡಿಗೇತರ ಪೋಷಕರಿಗೆ ಮತ್ತು ಮಕ್ಕಳಿಗಿಬ್ಬರಿಗೂ ಕಠಿಣ ಸ್ಥಿತಿ ಎದುರಾಗಿದ್ದು ಮಕ್ಕಳು ಬಲವಂತವಾಗಿ ಕನ್ನಡವನ್ನು ಕಲಿಯಬೇಕಾಗಿದೆ.
"ಒಬ್ಬ ಪೋಷಕಳಾಗಿ, ನನ್ನ ಮಗು ಈಗಾಗಲೇ ಹೆಚ್ಚಿನ ಸಿಲೆಬಸ್‌ನೊಂದಿಗೆ ಕಷ್ಟಪಡುತ್ತಿರುವಾಗ ಕನ್ನಡ ಕಲಿಕೆಯಲ್ಲಿ ನಾನು ಹೇಗೆ ಸಹಾಯ ಮಾಡಬೇಕು ಎಂದು ಚಿಂತಿತಳಾಗಿದ್ದೇನೆ. ಈಗಾಗಲೇ ಇರುವ ಸಿಲೆಬಸ್ ಮತ್ತು ಕಳಪೆ ಗುಣಮಟ್ಟದ ಬೋಧನೆಯಿಂದ ಮಕ್ಕಳು ಬಹಳಷ್ಟು ಬಳಲುತ್ತಿದ್ದಾರೆ, ಇದು ಕೇವಲ ಅವರ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎಂದು ಒಬ್ಬ ಪೋಷಕರಾಗಿ ತಮ್ಮ ತೊಂದರೆಯನ್ನು ನಿವೇದಿತಾ ಹೇಳಿಕೊಂಡಿದ್ದಾರೆ.
ಹಲವು ಕನ್ನಡಿಗೇತರ ಪೋಷಕರು ಮಕ್ಕಳ ಹೋಮ್‌ವರ್ಕ್‌ನಲ್ಲಿ ತಮ್ಮ ಕನ್ನಡ ಸ್ನೇಹಿತರ ಸಹಾಯವನ್ನು ಪಡೆಯುತ್ತಿದ್ದಾರೆ. ಮಕ್ಕಳು ಕನ್ನಡದ ಪೂರ್ಣ ಸಿಲೆಬಸ್ ಅನ್ನು ಕಲಿಯಬೇಕಾಗಿರುವುದರಿಂದ ಪೋಷಕರು ತಮ್ಮ ಮಕ್ಕಳಿಗೆ ಸಹಾಯ ಮಾಡಲು ಮೊದಲ ಹಂತದ ಕನ್ನಡವನ್ನು ಕಲಿತುಕೊಂಡರೆ ಯಾವುದೇ ಪ್ರಯೋಜನವಿಲ್ಲ ಎನ್ನುವುದು ಹಲವರ ಅಭಿಪ್ರಾಯವಾಗಿದೆ.
ಕನ್ನಡವನ್ನು ಕಡ್ಡಾಯವಾಗಿಸಿರುವ ನಿಯಮದಿಂದ ಹಲವು ಖಾಸಗಿ ಶಾಲೆಗಳು ಸಂತೋಷವಾಗಿಲ್ಲ. ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ನೋಡಲು ಹಲವು ಶಾಲೆಗಳು ಮತ್ತು ಶಿಕ್ಷಕರು ಕಾಯುತ್ತಿದ್ದಾರೆ.