Webdunia - Bharat's app for daily news and videos

Install App

ಮಾನವೀಯತೆ ಮರೆದ ಸನ್ನಿ ಲಿಯೋನ್; ಕೇರಳದ ಪ್ರವಾಹ ಪರಿಹಾರ ನಿಧಿಗೆ 5 ಕೋಟಿ ರೂ.

Webdunia
ಸೋಮವಾರ, 20 ಆಗಸ್ಟ್ 2018 (18:01 IST)
ತಿರುವನಂತಪುರಂ: ಮಹಾಮಳೆಗೆ ಇಡೀ  ಕೇರಳವೇ ಬೆಚ್ಚಿಬಿದ್ದಿದೆ. ಕೆಲವು ನಟ, ನಟಿಯರು ತಮ್ಮಿಂದ ಆದ ಸಹಾಯ ಮಾಡಿದ್ದಾರೆ. ಇನ್ನು ಕೆಲವು ನಟ-ನಟಿಯರು ಸಹಾಯ ಮಾಡಿ ಎಂದು ನೆಪ ಮಾತ್ರಕ್ಕೆ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿ ಸುಮ್ಮನಾಗಿದ್ದಾರೆ. ಆದರೆ ಈ ನಟಿ ಮಾತ್ರ ಮಾನವೀಯತೆ ಮರೆದಿದ್ದಾಳೆ. ಹಾಗೇ ಅದನ್ನೂ ಎಲ್ಲಿಯೂ ಹೇಳಿಕೊಂಡಿಲ್ಲ. ಅಷ್ಟಕ್ಕೂ ಈ ನಟಿ ಎಂದರೆ ಎಲ್ಲರೂ ಮೂಗು ಮುರಿಯುವವರೇ ಹೆಚ್ಚು. ಆದರೆ ಇಂದು ಆಕೆ ತನ್ನ ಮಾನವೀಯತೆಯ ಮೂಲಕ ಎಲ್ಲರ ಮನಗೆದ್ದಿದ್ದಾರೆ.


ಬಾಲಿವುಡ್‍ನ ಮಾದಕ ಬೆಡಗಿ ಸನ್ನಿ ಲಿಯೋನ್ ಕೇರಳ ಪ್ರವಾಹ ಪರಿಹಾರ ನಿಧಿಗೆ 5 ಕೋಟಿ ರೂ. ನೀಡಿದ್ದಾರೆ ಎಂದು ಮಲೆಯಾಳಂ ಚಿತ್ರದ ನಿರ್ದೇಶಕರೊಬ್ಬರು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.


ಪ್ರವಾಹದಿಂದಾಗಿ ಕೇರಳ ತಲ್ಲಣಿಸಿಹೋಗಿದೆ. ಜನರು ಬೀದಿಗೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ಪ್ರವಾಹ ಪರಿಹಾರ ನಿಧಿಗೆ ಸನ್ನಿ ಲಿಯೋನ್ 5 ಕೋಟಿ ರೂ. ನೀಡಿದ್ದಾರೆ. ಸನ್ನಿ ಲಿಯೋನ್ ಸಹಾಯದ ಬಗ್ಗೆ ಮಲೆಯಾಳಂ ನಿರ್ದೇಶಕ, ಬರಹಗಾರರಾದ ಅಜಯ್ ದೇವಲೋಕ ಪ್ರತಿಕ್ರಿಯಿಸಿ ಸನ್ನಿ ಲಿಯೋನ್‍ಗೆ ಧನ್ಯವಾದ ತಿಳಿಸಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.


‘ಸನ್ನಿ ಲಿಯೋನ್ ನಿಮಗೆ ತುಂಬಾ ಧನ್ಯವಾದಗಳು. ನಮ್ಮ ಕಷ್ಟದ ಸಮಯದಲ್ಲಿ ನೀವು ನೀಡಿದ ಈ ಕೊಡುಗೆಯನ್ನು ಕೇರಳಿಗರು ಎಂದಿಗೂ ಮರೆಯುವುದಿಲ್ಲ. ನಾನು ಈ ಸಮಯದಲ್ಲಿ ನಿಮಗೆ ಧನ್ಯವಾದ ತಿಳಿಸಲು ಇಷ್ಟಪಡುತ್ತೇನೆ ಕೇರಳ ನಿಮಗೆ ಚಿರಋಣಿಯಾಗಿರುತ್ತದೆ’ ಎಂದಿದ್ದಾರೆ.


ಕೇರಳ ಪ್ರವಾಹ ಪೀಡಿತರಿಗೆ 5 ಕೋಟಿ ರೂ. ನೀಡಿದ್ದರ ಕುರಿತು ಇದೂವರೆಗೂ ಸನ್ನಿ ಲಿಯೋನ್ ಎಲ್ಲಿಯೂ ಹೇಳಿಕೊಂಡಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಅಜಿತ್ ಕುಮಾರ್‌ಗೆ ಯಾಕೆ ಪದೇ ಪದೇ ಹೀಗಾಗುತ್ತಿದೆ, ಅಭಿಮಾನಿಗಳಿಗೆ ಟೆನ್ಷನ್‌

Darshan Thoogudeepa video: ಪತ್ನಿಯನ್ನು ತಬ್ಬಿಕೊಂಡು ಮುದ್ದು ರಾಕ್ಷಸಿ ಎಂದು ದರ್ಶನ್ ಡ್ಯಾನ್ಸ್ ಮಾಡಿದ್ದೇ ಮಾಡಿದ್ದು

Darshan: ವಿವಾಹ ವಾರ್ಷಿಕೋತ್ಸವಕ್ಕೆ ದರ್ಶನ್ ಜೊತೆಗಿರುವ ಫೋಟೋ ಹಾಕಿ ಸಖತ್ ಟಾಂಗ್ ಕೊಟ್ಟ ವಿಜಯಲಕ್ಷ್ಮಿ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

ಮುಂದಿನ ಸುದ್ದಿ