ಮುಂಬೈ: ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಅವರ ಬಹು ಅಂತಸ್ತಿನ ಐಷಾರಾಮಿ ಬಂಗಲೆ ಮನ್ನತ್ ಬಗ್ಗೆ ಎಲ್ಲರಿಗೂ ಗೊತ್ತು. ಈ ಮನೆಯ ನಾಮಫಲಕ ಎಷ್ಟು ದುಬಾರಿ ಗೊತ್ತಾ?
ಮುಂಬೈನಲ್ಲಿರುವ ಮನ್ನತ್ ಇಲ್ಲಿನ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದು. ಕೆಲವೊಮ್ಮೆ ಇಲ್ಲಿ ಶಾರುಖ್ ಬಾಲ್ಕನಿಯಲ್ಲಿ ನಿಂತು ಅಭಿಮಾನಿಗಳಿಗೆ ದರ್ಶನ ನೀಡುತ್ತಾರೆ.
ಇಂತಿಪ್ಪ ಐಷಾರಾಮಿ ಮನೆಗೆ ಅಷ್ಟೇ ದುಬಾರಿ ನಾಮಫಲಕವೂ ಇದೆ. ಮನ್ನತ್ ಎಂದು ಬರೆಯಲಾಗಿರುವ ನಾಮಫಲಕಕ್ಕೇ 25 ಲಕ್ಷ ರೂ. ಖರ್ಚು ಮಾಡಲಾಗಿದೆಯಂತೆ!