ಮುಂಬೈ : ಬಾಲಿವುಡ್ ನ ಕೃಷ್ಣಸುಂದರಿ ಎಂದೇ ಕರೆಸಿಕೊಳ್ಳುವ ನಟಿ ಬಿಪಾಶ ಬಸು ಚಿತ್ರೋದ್ಯಮಕ್ಕೆ ಕಾಲಿಟ್ಟು ಸರಿಸುಮಾರು 12 ವರ್ಷಗಳಾಗಿವೆಯಾದರೂ ತನ್ನ ಗ್ಲಾಮರ್ ಪಾತ್ರಗಳಿಂದ ಇಂದಿಗೂ ಗಮನಸೆಳೆಯುತ್ತಿರುವ ತಾರೆ. ಬಿಕಿನಿಯಿಂದ ಹಿಡಿದು ಚುಂಬನ ದೃಶ್ಯಗಳವರೆಗೂ ಲೀಲಾಜಾಲ ಅಭಿನಯಿಸುವ ಸ್ಟೈಲಿಶ್ ನಟಿ.
ಇಂತಹ ಮಾದಕ ನಟಿ ಬಿಪಾಶ ಬಸು ಅವರ ವಯಸ್ಸು 40ರ ಆಸುಪಾಸಿನಲ್ಲಿದ್ದರೂ ಕೂಡ ಅವರ ದೇಹ ಮಾತ್ರ ಇಂದಿಗೂ 25ರ ಹರೆಯದಂತಿದೆ. ಇದೀಗ ಅವರು ತಮ್ಮ ಈ ಫಿಟ್ನೆಸ್ ಗೆ ಕಾರಣವೆನೆಂಬುದನ್ನು ತಿಳಿಸಿದ್ದಾರೆ.
ಕರಣ್ ಗ್ರೋವರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಬಿಪಾಶಾ ಇನ್ನೂ ಫಿಟ್‌ನೆಸ್ ಅನ್ನು ಮರೆತಿಲ್ಲ. ಗಂಡನ ಜೊತೆಗೇ ವರ್ಕೌಟ್ ಮಾಡುತ್ತಾರಂತೆ. ಆ ಫೊಟೋಗಳನ್ನೂ ಬಿಪಾಶ ಇನ್ಸ್ಟಾಗ್ರಾಂನಲ್ಲಿ ಕೂಡ ಪೋಸ್ಟ್ ಮಾಡುತ್ತಿರುತ್ತಾರೆ.
ಹಾಗೇ ಬೆಳ್ಳಂಬೆಳಗ್ಗೆ 6 ಎಗ್‌ವೈಟ್ ತಿನ್ನೋ ಈ ಚೆಲುವೆಗೆ ಹೆವ್ವೀ ಬ್ರೇಕ್‌ಫಾಸ್ಟ್ ಕ್ರೇಜ್ ಅಂತೆ. ಆದರೆ ಊಟ ಬಹಳ ಸಿಂಪಲ್. ಚಪಾತಿ, ದಾಲ್ ಮತ್ತು ತರಕಾರಿ ಯಷ್ಟೇ. ಸಂಜೆ ಡೈಜೆಸ್ಟಿವ್ ಬಿಸ್ಕೆಟ್ಸ್ ತಿಂದರೆ ರಾತ್ರಿ ಗ್ರಿಲ್ಡ್ ಚಿಕನ್, ತರಕಾರಿ ತಿನ್ತಾರಂತೆ. ಯೋಗ, ಟ್ರೆಡ್ ಮಿಲ್, ಸೈಕ್ಲಿಂಗ್ ಕೂಡ ಮಾಡುತ್ತಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ