ರೀಮಾ ಕಗ್ಟಿ ಅವರ ನಿರ್ದೇಶನದ, ಅಕ್ಷಯ್ ಕುಮಾರ್ ಅವರ ಮುಖ್ಯ ಭೂಮಿಕೆಯ ಗೋಲ್ಡ್ ಸಿನಿಮಾ ಬಾಕ್ಸ್-ಆಫೀಸ್‌ನಲ್ಲಿ 13 ನೇ ದಿನದಂದು 100.45 ಕೋಟಿಗಳನ್ನು ಸಂಗ್ರಹಿಸಿದೆ. ಇದು ಅಕ್ಷಯ್ ಕುಮಾರ್ ಅವರ 100 ಕೋಟಿ ಕ್ಲಬ್‌ಗೆ ಸೇರಿದ 9 ನೇ ಚಲನಚಿತ್ರವಾಗಿದೆ.
ಟ್ರೇಡ್ ವಿಶ್ಲೇಷಕ ತರುಣ್ ಆದರ್ಶ್ ಈ ವಿಷಯವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು "#13 ನೇ ದಿನದಂದು ಗೋಲ್ಡ್ 100 ಕೋಟಿಯನ್ನು ದಾಟಿದೆ...[ವಾರ 2] ಶುಕ್ರ 1.85 ಕೋಟಿ, ಶನಿ 3.10 ಕೋಟಿ, ಭಾನು 4.75 ಕೋಟಿ, ಸೋಮ 1.45 ಕೋಟಿ. ಒಟ್ಟು: 100.45 ಕೋಟಿ. ಭಾರತ ಬಿಝ್... 100 ಕೋಟಿ ಕ್ಲಬ್‌ನಲ್ಲಿ ಅಕ್ಷಯ್ ಕುಮಾರ್ ಅವರ ಒಂಭತ್ತನೇ ಚಲನಚಿತ್ರ" ಎಂದು ಬರೆದಿದ್ದಾರೆ.
ಗೋಲ್ಡ್ ಮೂಲಕ, ಅಕ್ಷಯ್ ಕುಮಾರ್ ಈಗ 100 ಕೋಟಿ ಕ್ಲಬ್ ಸಿನಿಮಾಗಳಲ್ಲಿ ಚಿತ್ರಗಳ ಸಂಖ್ಯೆಗೆ ಬಂದಾಗ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲನೇ ಸ್ಥಾನದಲ್ಲಿ ಸಲ್ಮಾನ್ ಖಾನ್ ಇದ್ದು ಸತತ 13 ಚಿತ್ರಗಳು ನೂರು ಕೋಟಿ ಬಾಚಿ ಅಗ್ರಸ್ಥಾನದಲ್ಲಿದ್ದಾರೆ.
ಗೋಲ್ಡ್ ಈಗ 2018 ರ ಅತಿ ಹೆಚ್ಚು ಹಣ ಗಳಿಸಿದ ಚಲನಚಿತ್ರಗಳ ಪಟ್ಟಿಯಲ್ಲಿ ಏರಿಕೆ ಕಂಡಿದೆ ಮತ್ತು ಕರೀನಾ ಕಪೂರ್ ಮತ್ತು ಸೋನಮ್ ಕಪೂರ್ ಅಭಿನಯದ ವೀರೆ ದಿ ವೆಡ್ಡಿಂಗ್ ಚಿತ್ರದ ಬಾಕ್ಸ್ ಆಫೀಸ್ ಸಂಗ್ರಹವನ್ನು ಮೀರಿ ಯಶಸ್ಸನ್ನು ಕಾಣುತ್ತಿದೆ. ಇದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಸಹ ಉತ್ತಮ ಪ್ರತಿಕ್ರಿಯೆಯನ್ನು ಹೊಂದಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹಣ ಗಳಿಸುವ ಸಾಧ್ಯತೆಗಳಿವೆ. ಗೋಲ್ಡ್ 2018 ರ ಅತಿ ಹೆಚ್ಚು ಹಣ ಗಳಿಸಿದ 8 ನೇ ಚಿತ್ರವಾಗಿದೆ.