‘ನಾನು ಸಾರ್ವಜನಿಕ ವಲಯದಿಂದ ಟೀಕೆಗೆ ಗುರಿಯಾದಷ್ಟೂ, ಅವುಗಳನ್ನು ಧನಾತ್ಮಕ ಅಂಶವಾಗಿ ಪರಿಗಣಿಸುವುದರ ಮೂಲಕ ಬೆಳೆಯುತ್ತೇನೆ. ನಾನು ಏನು ಎಂಬುದನ್ನು ಕೆಲವು ಬಾರಿ ಟೀಕಾಕಾರರೇ ತಮ್ಮ ಟೀಕೆಗಳ ಮೂಲಕ ನನಗೆ ತಿಳಿಸುತ್ತಾರೆ. ಅವುಗಳನ್ನು ನನ್ನ ಬೆಳವಣಿಗೆಗೆ ಉಪಯೋಗಿಸಿಕೊಳ್ಳುತ್ತೇನೆ’ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
ಹಾಗೇಯೇ ನಿಮ್ಮ ಬೆಳವಣಿಗೆಯ ವಿಚಾರದಲ್ಲಿ ಟೀಕೆ ಮಾಡುವವರ ವಿರುದ್ದ ತಿರುಗಿ ಬೀಳದೇ, ಸಂಯಮದಿಂದ ಅವುಗಳನ್ನು ದಾಟುವುದು ಉತ್ತಮ. ಹಾಗೆಯೇ ಕಾಲೆಳೆಯುವವರಿಗೆ ನಮ್ಮ ಕಾಲುಗಳು ಸಿಗದಂತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎಚ್ಚರಿಕೆ ವಹಿಸುವುದು ಅವಶ್ಯಕ ಎಂದು ಅಕ್ಷಯ್ ಸಲಹೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ