ಮುಂಬೈ: ಐಪಿಎಲ್ ಆಡಲು ಮುಂಬೈಗೆ ಬಂದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವಿರಾಟ್ ಕೊಹ್ಲಿ ತಮ್ಮ ರೆಸ್ಟೋರೆಂಟ್ ನಲ್ಲಿ ಔತಣಕೂಟ ಏರ್ಪಡಿಸಿದ್ದರು.
ಈ ವೇಳೆ ಕೊಹ್ಲಿ-ಅನುಷ್ಕಾ ದಂಪತಿ ಫೋಟೋಗ್ರಾಫರ್ ಗಳಿಗೆ ಪೋಸ್ ನೀಡಿದ್ದರು. ಈ ವೇಳೆ ಕ್ಯಾಮರಾ ಮ್ಯಾನ್ ಒಬ್ಬರು ಅನುಷ್ಕಾರನ್ನು ಸರ್ ಎಂದು ಕರೆದು ಎಡವಟ್ಟು ಮಾಡಿದ್ದಾರೆ.
ಇದನ್ನು ಗಮನಿಸಿದ ಕೊಹ್ಲಿ ಕ್ಯಾಮರಾಮ್ಯಾನ್ ಕಾಲೆಳೆದಿದ್ದಾರೆ. ಹಾಗಿದ್ರೆ ನನ್ನನ್ನು ಮೇಡಂ ಎಂದು ಕರೆಯಿರಿ ಎಂದು ತಮಾಷೆ ಮಾಡಿದ್ದಾರೆ.