Webdunia - Bharat's app for daily news and videos

Install App

ಬಾಲಿವುಡ್ ನಟ ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಮಾಡಿದ ನ್ಯಾ. ರವೀಂದ್ರ ಕುಮಾರ್ ಜೋಷಿ ಅವರ ವರ್ಗಾವಣೆ!

Webdunia
ಶನಿವಾರ, 7 ಏಪ್ರಿಲ್ 2018 (10:22 IST)
ಜೋಧ್ಪುರ : ಕೃಷ್ಣ ಮೃಗಗಳ ಭೇಟಿಯಾಡಿದ ಪ್ರಕರಣದಡಿ ಈಗಾಗಲೇ ಜೈಲು ಶಿಕ್ಷೆ ಅನುಭವಿಸುತ್ತಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಜಾಮೀನು ಅರ್ಜಿ ವಿಚಾರಣೆ ಮಾಡಿದ  ನ್ಯಾ. ರವೀಂದ್ರ ಕುಮಾರ್ ಜೋಷಿ ಅವರನ್ನು  ವರ್ಗಾವಣೆ ಮಾಡಿದ ಕಾರಣ ಸಲ್ಮಾನ್ ಖಾನ್ ಅವರಿಗೆ ಒಂದು ಶಾಕಿಂಗ್ ನ್ಯೂಸ್ ಕಾದಿತ್ತು. ಆದರೆ ಇದೀಗ ವರ್ಗಾವಣೆಗೂ ಮುನ್ನ ಅವರೇ ಬಂದು ತೀರ್ಪನ್ನು ನೀಡುವುದಾಗಿ ತಿಳಿದುಬಂದಿದೆ.


ಜೋಧ್ಪುರ ಸೆಷನ್ಸ್ ಕೋರ್ಟ್ 20 ವರ್ಷಗಳ ಹಿಂದೆ 2 ಕೃಷ್ಣ ಮೃಗಗಳ ಭೇಟಿಯಾಡಿದ್ದಕ್ಕಾಗಿ ನಟ ಸಲ್ಮಾನ್ ಖಾನ್ ಅವರಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿತ್ತು. ಈ ಹಿನ್ನಲೆಯಲ್ಲಿ ಅವರ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಶುಕ್ರವಾರ ಜೋಧ್ಪುರ ಸೆಷನ್ಸ್ ಕೋರ್ಟ್ ನಲ್ಲಿ ನ್ಯಾ. ರವೀಂದ್ರ ಕುಮಾರ್ ಜೋಷಿ ಅವರು ವಿಚಾರಣೆ ನಡೆಸಿ ತೀರ್ಪನ್ನು ಶನಿವಾರ (ಇಂದು) ನೀಡುವುದಾಗಿ ತಿಳಿಸಿದ್ದರು.


ಆದರೆ ಸಲ್ಮಾನ್ ಖಾನ್ ಜಾಮೀನು ಅರ್ಜಿಯ ವಿಚಾರಣೆ ನಡೆಸಬೇಕಿದ್ದ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಸಲ್ಮಾನ್ ಖಾನ್ ಗೆ ಇಂದು ಕೂಡ ಜಾಮೀನು ಸಿಗುವ ಸಾಧ್ಯತೆ ವಿರಳವಾಗಿದೆ ಎಂಬ ಸಂಶಯ ಹಲವರಲ್ಲಿತ್ತು. ಆದರೆ ಇದೀಗ ನ್ಯಾ. ರವೀಂದ್ರ ಕುಮಾರ್ ಜೋಷಿ ಅವರು ವರ್ಗಾವಣೆಗೂ ಮೊದಲ್ಲೆ ತೀರ್ಪನ್ನು ನೀಡುವುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments