Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೃಷ್ಣ ಮೃಗಗಳ ಬೇಟೆಯಾಡಿದ ಪ್ರಕರಣ ; ನಟ ಸಲ್ಮಾನ್ ಖಾನ್ ಗೆ 5 ವರ್ಷ ಶಿಕ್ಷೆ ಹಾಗೂ 10ಸಾವಿರ ದಂಡ

ಕೃಷ್ಣ ಮೃಗಗಳ ಬೇಟೆಯಾಡಿದ ಪ್ರಕರಣ ; ನಟ ಸಲ್ಮಾನ್ ಖಾನ್ ಗೆ 5 ವರ್ಷ ಶಿಕ್ಷೆ ಹಾಗೂ 10ಸಾವಿರ ದಂಡ
ರಾಜಸ್ಥಾನ , ಗುರುವಾರ, 5 ಏಪ್ರಿಲ್ 2018 (12:43 IST)
ರಾಜಸ್ಥಾನ : ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಸಹ ನಟ ನಟಿಯರು 20 ವರ್ಷಗಳ ಹಿಂದೆ ಕೃಷ್ಣ ಮೃಗಗಳ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ(ಇಂದು) ರಾಜಸ್ಥಾನದ ಜೋಧ್ ಪುರ ಕೋರ್ಟ್ ಅಂತಿಮ ತೀರ್ಪುನ್ನು ಪ್ರಕಟಿಸಿದೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್‌ 28ರಂದು ವಿಚಾರಣೆ ನಡೆಸಿದ ನ್ಯಾ.ದೇವ್‌ಕುಮಾರ್‌ ಖತ್ರಿ ಅವರು ಇಂದು ಅಂತಿಮ ತೀರ್ಪನ್ನು ನೀಡಿದ್ದು, ಇದರಲ್ಲಿ ನಟ ಸಲ್ಮಾನ್ ಖಾನ್ ಅವರು ದೋಷಿ ಎಂದು ಪ್ರಕಟಿಸಲಾಗಿದೆ. ಆದರೆ ಉಳಿದ ನಾಲ್ವರು ನಟ-ನಟಿಯರನ್ನು ಈ ಆರೋಪದಿಂದ ಖುಲಾಸೆಗೊಳಿಸಿದ್ದಾರೆ.


ಈ ಪ್ರಕರಣದಲ್ಲಿ 1ವರ್ಷದಿಂದ ಗರಿಷ್ಠ 6 ವರ್ಷಗಳ ಕಾಲ ಶಿಕ್ಷೆ ವಿಧಿಸುವ ಅವಕಾಶವಿದ್ದು, ಇದೀಗ ದೋಷಿ ಎಂದು ಪರಿಗಣಿಸಿದ ನಟ ಸಲ್ಮಾನ್ ಖಾನ್ ಅವರಿಗೆ 5 ವರ್ಷಗಳ ಕಾಲ ಶಿಕ್ಷೆ ಜೊತೆಗೆ 10 ಸಾವಿರ ರೂ.ದಂಡ ವಿಧಿಸಲಾಗಿದೆ. ಜಾಮೀನು ಅರ್ಜಿ ಸಲ್ಲಿಸುವ ಅವಕಾಶವಿದೆ. ಈ ಕಾರಣದಿಂದ ಶ್ಯೂರಿಟಿಗಳು ಈಗಾಗಲೇ ಕೋರ್ಟ್ ಗೆ ಆಗಮಿಸಿದ್ದರಿಂದ ನಟ ಸಲ್ಮಾನ್ ಅವರು ಕೂಡ ತಕ್ಷಣ ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೃಷ್ಣ ಮೃಗಗಳ ಬೇಟೆಯಾಡಿದ ಪ್ರಕರಣ; ನಟ ಸಲ್ಮಾನ್ ಖಾನ್ ದೋಷಿ, ಉಳಿದ ನಾಲ್ವರು ಆರೋಪದಿಂದ ಖುಲಾಸೆ